ವೈದ್ಯಕೀಯ ಉಚಿತ ತಪಾಸಣಾ ಶಿಬಿರ
ಉಡುಪಿ: ಇಲ್ಲಿನ ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವೈದ್ಯಕೀಯ ಉಚಿತ ತಪಾಸಣಾ ಶಿಬಿರ ತೆಂಕನಿಡಿಯೂರು ಗ್ರಾಪಂ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು. ಶಿಬಿರವನ್ನು ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಖಲೀಲ್ ಅಹ್ಮದ್ ಉದ್ಘಾಟಿಸಿದರು.
ಅತಿಥಿಗಳಾಗಿ ತೆಂಕನಿಡಿಯೂರು ಗ್ರಾಪಂ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸಂಸ್ಥೆಯ ಎನ್ಆರ್ಸಿಸಿ ಜಿದ್ದಾ ಘಟಕದ ಸದಸ್ಯ ಆತಿಶ್ ಅಹ್ಮದ್, ಮಧುಸೂದನ್ ಹೆರೂರು, ರವೀಂದ್ರ ಕಡೆಕಾರ್ ಉಪಸ್ಥಿತರಿದ್ದರು. ಉಡುಪಿ ಘಟಕದ ಅಧ್ಯಕ್ಷ ಕಾಸಿಮ್ ಬಾರ್ಕೂರು ಸ್ವಾಗತಿಸಿದರು. ಕೋಶಾಧಿಕಾರಿ ನಾಸೀರ್ ಯಾಕೂಬ್ ವಂದಿಸಿದರು. ರಾಜೇಶ್ ನಿರೂಪಿಸಿದರು. ತಜ್ಞ ವೈದ್ಯರಾದ ಡಾ. ರತೀಶ್ ಜಾನ್ಸನ್, ಡಾ.ಎಂ.ಕೆ. ಕಾಮತ್, ಡಾ. ನೆಹರೂ ಎಸ್. ಮಂಡಳ್, ಡಾ. ತೇಜಸ್ಸಿ ಕಿರಣ್, ಡಾ. ರಶ್ಮಿ ಭಟ್, ಡಾ. ಝೀನಾ ಡಿಸೋಜ, ಡಾ. ಅಮ್ರಿನ್ ಶಿಬಿರ ನಡೆಸಿಕೊಟ್ಟರು. ಶಿಬಿರದಲ್ಲಿ ಸುಮಾರು 140 ಮಂದಿ ಭಾಗವಹಿಸಿದ್ದು, ಅದರಲ್ಲಿ ಮೂವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.