ಬಂಟಕಲ್ಲು: ಸಂವಹನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಬಂಟಕಲ್ಲು: ಇಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ದಶರಥರಾಜ ಶೆಟ್ಟಿ, ಪ್ರೊ. ಪ್ರವೀಣ್ ಶೆಟ್ಟಿ, ಪ್ರೊ. ಶ್ರೀಕಾಂತ ಪ್ರಭು ಮತ್ತು ಆದಿತ್ಯ ಶೆಟ್ಟಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವಿದ್ಯಾಲಯದ ಪ್ರಾಂಶುಪಾಲ ಪ್ರೊ.ಡಾ. ರಾಧಾಕೃಷ್ಣ ಎಸ್. ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳ ಸಂದರ್ಶನದಲ್ಲಿ ಅನುಸರಿಸಬೇಕಾದ ನಡೆನುಡಿ, ಸಂದರ್ಶನ ಎದುರಿಸುವ ವಿಧಾನ ಇತ್ಯಾದಿಗಳನ್ನು ತಿಳಿಸಿಕೊಟ್ಟರು.
ಅಲ್ಲದೆ ಸಮೂಹ ಚರ್ಚೆ ಇದರ ಬಗ್ಗೆಯೂ ವಿಸ್ತಾರವಾದ ಮಾಹಿತಿಯನ್ನು ಒದಗಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ತರಬೇತಿ ಮತ್ತು ನೇಮಕಾತಿ ವಿಭಾಗದ ಸಂಯೋಜಕ ಪ್ರೊ. ವೇಣುಗೋಪಾಲ ರಾವ್ ವಂದಿಸಿದರು.