ಶಿರೂರು: ಬಿಲ್ಲವ ಸಂಘದ ವಿವಿಧ ಘಟಕ ಉದ್ಘಾಟನೆ
ಶಿರೂರು: ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಸಮ್ಮಿಲನ ಹಾಗೂ ವಿವಿಧ ಘಟಕಗಳನ್ನು ಇತ್ತೀಚೆಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈಯುಕ್ತಿಕ ವಿಚಾರಗಳಲ್ಲಿ ಭಿನ್ನತೆ ಇದ್ದರೂ ಸಮುದಾಯದ ಅಭಿವೃದ್ಧಿಗೆ ಒಂದಾಗಿ ದುಡಿಯಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ರಘರಾಮ ಪೂಜಾರಿ ಶಿರೂರು, ವಲಯ ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ ಟೀಚರ್ ಉಬ್ಬೇರಿ, ಶಿರೂರು ಬಿಲ್ಲವ ಸಂಘದ ನೂತನ ಅಧ್ಯಕ್ಷ ಮಂಜುನಾಥ ಬಿಲ್ಲವ, ಕಾರ್ಯದರ್ಶಿ ಸಿ.ಎನ್. ಬಿಲ್ಲವ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಪ್ರಭಾಕರ, ಕ್ರೀಡಾ ಘಟಕದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಸಂಘಧ ಗೌರಾವಾಧ್ಯಕ್ಷ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಚಿಕ್ಕು ಪೂಜಾರಿ ಶಿರೂರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರುಣಕುಮಾರ ಶಿರೂರು ಅವರನ್ನು ಸನ್ಮಾನಿಸಲಾಯಿತು. ಪ್ರಭಾಕರ ಸ್ವಾಗತಿಸಿದರು.
ಶಂಕರ ಬಿಲ್ಲವ ವರದಿ ವಾಚಿಸಿದರು. ಮಾಧವ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ವಂದಿಸಿದರು.