ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಂತರ್ಜಾಲ ದುಡ್ಡಿನ ಯೋಜನೆ: ಉಡುಪಿ ವ್ಯಕ್ತಿಗೆ ವಂಚನೆ

Lingaraj Badiger
Updated On : 28 Mar 2013, 10:38 am

ಉಡುಪಿ: ಅಂತರ್ಜಾಲ ಮೂಲಕ ಹಣ ಸಂಪಾದನೆ ಆಸೆಗೆ ಬಿದ್ದು ಮೋಸ ಹೋದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಸಮೀಪದ ಬೈದಬೆಟ್ಟು ಗ್ರಾಮದ ನಿವಾಸಿ ಕೆ. ವಿಶ್ವನಾಥ ಮೋಸಕ್ಕೊಳಗಾದವರು. ಆರೋಪಿಗಳು ದೆಹಲಿಯ ಇ-ಫೇಮ್  ಎಡಸೆನ್ಸ್ ಪ್ರೈ. ಲಿ. ಸಂಸ್ಥೆಯ ನಿರ್ದೇಶಕ ತಾಫಸ್ ರೈ ಮತ್ತು ಸುನಿಲ್ ಕುಮಾರ್, ಪ್ರಾದೇಶಿಕ ಪ್ರತಿನಿಧಿ ಕುಲುವಿಂದರ್ ಸಿಂಗ್. ಈ ಆರೋಪಿಗಳು ಮಂಗಳೂರಿನ ದೀಪಕ್ ಶೆಟ್ಟಿ ಎಂಬವರ ಮೂಲಕ ವಿಶ್ವನಾಥ್‌ಗೆ ಪರಿಚಿತರಾಗಿದ್ದರು.
ಮೋಸ ನಡೆದಿದ್ದು ಹೀಗೆ...: ಆರೋಪಿಗಳು ತಮ್ಮ ಕಂಪನಿಯಲ್ಲಿ ರು. 7000 ಹೂಡಿದರೆ ಪ್ರತಿ ತಿಂಗಳು ರು. 3100 ಸಂಪಾದಿಸಬಹದು ಎಂದು ಹೇಳಿದ್ದರು. ಅಲ್ಲದೆ ಬೇರೆಯವರನ್ನೂ ಕೂಡ ಈ ಸಂಸ್ಥೆಗೆ ಹೂಡಿಕೆದಾರರನ್ನಾಗಿ ಸೇರಿಸಿದರೆ ಇನ್ನೂ ಹೆಚ್ಚು ಸಂಪಾದಿಸಬಹುದು ಎಂದು ಆಸೆ ತೋರಿಸಿದ್ದರು. ಅದರಂತೆ ವಿಶ್ವನಾಥ 2012ರಲ್ಲಿ ಈ ಸಂಸ್ಥೆಯಲ್ಲಿ ರು. 7000 ಹೂಡಿದ್ದರು ಮತ್ತು ಸುಮಾರು 150ಕ್ಕಿಂತ ಹೆಚ್ಚು ಜನರಿಂದ ರು. 10,50,000 ಹೂಡಿಕೆ ಮಾಡಿಸಿದ್ದರು. ಇದಕ್ಕೆಲ್ಲಾ ನೋಂದಣಿ ಪತ್ರವನ್ನೂ ಸಂಸ್ಥೆ ನೀಡಿತ್ತು. ಆರಂಭದಲ್ಲಿ ಸಂಸ್ಥೆಯ ರು. 3100ರ ಒಂದು ಕಂತನ್ನು ನೀಡಿತ್ತು. ಉಳಿದ ಹಣಕ್ಕೆ ವಿಚಾರಿಸಿದಾಗ ಸಂಸ್ಥೆಯು ಕಾರ್ಯ ಸ್ಥಗಿತಗೊಂಡಿರುವುದು ತಿಳಿಯಿತು. ವಿಶ್ವನಾಥ ಮಾ. 1ರಂದು ದೆಹಲಿಯಲ್ಲಿರುವ ಸಂಸ್ಥೆಯ ರಿಜಿಸ್ಟರ್ಡ್ ಕಚೇರಿಗೆ ಹೋದಾಗ ಇದು ನಕಲಿ ಕಂಪನಿ ಎಂಬುದಾಗಿ ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಕೆ. ವಿಶ್ವನಾಥ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement