ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೀಳು ರಾಜಕೀಯ ವಿರುದ್ಧ ನಾಳೆ ಪೇಜಾವರ ಶ್ರೀ ನೇತೃತ್ವದ ಸಮಾವೇಶ

Vishwanath S
Updated On : 1 Apr 2013, 11:44 am

ಉಡುಪಿ: ಉಡುಪಿಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಸೆಕ್ಸ್ ಸಿ.ಡಿ.ಯಂತಹ ಕೀಳು ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ 'ಪ್ರಜಾಪ್ರಭುತ್ವದ ಮಾನ ಉಳಿಸಿ' ಎಂಬ ಪಕ್ಷಾತೀತ ಸಾರ್ವಜನಿಕ ಸಮಾವೇಶವೊಂದನ್ನು ಉಡುಪಿಯ ಚಿತ್ತರಂಜನ್ ಸರ್ಕಲ್,ನಲ್ಲಿ ಮಂಗಳವಾರ ಸಂಜೆ 4.30ಕ್ಕೆ ಆಯೋಜಿಸಲಾಗುತ್ತಿದೆ. ಈ ಸಭೆಯ ನೇತೃತ್ವವನ್ನು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ವಹಿಸಲಿದ್ದಾರೆ. ಸಮಾವೇಶದ ಬಗ್ಗೆ ಪೂರ್ವಭಾವಿಯಾಗಿ ಭಾನುವಾರ ಸರ್ವ ಪಕ್ಷಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಮಾವೇಶದಲ್ಲಿ ವಿವಿಧ ಮಠಾಧೀಶರು, ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರಲ್ಲೊಬ್ಬರಾದ ವಾಸುದೇವ ಭಟ್ ತಿಳಿಸಿದ್ದಾರೆ.

ಠಾಣೆಗೆ ಕೋವಿ ಒಪ್ಪಿಸಲು ಸೂಚನೆ
ಬಂಟ್ವಾಳ:
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪರವಾನಗಿ ಹೊಂದಿರುವ ಕೋವಿದಾರರು ತಮ್ಮ ಕೋವಿಗಳನ್ನು ಠಾಣೆಗೆ ತಂದು ಒಪ್ಪಿಸುವಂತೆ ಬಂಟ್ವಾಳ ಪೊಲೀಸ್ ವೃತ್ತನಿರೀಕ್ಷಕ ಅನಿಲ್ ಎಸ್. ಕುಲಕರ,ಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement