ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮೂಡುಬಿದಿರೆ: ನಳಿನ್ ಕುಮಾರ್, ಸತ್ಯಜಿತ್ ಸುರತ್ಕಲ್ ಆಕಾಂಕ್ಷಿಗಳುಟಿ ಪ್ರಕಾಶ್ ಮೂಲ್ಕಿ ಅಭಯ, ಅಮರ ಸಮರ

Vishwanath S
Updated On : 1 Apr 2013, 11:43 am

ಮೂಡುಬಿದಿರೆ: ನಳಿನ್ ಕುಮಾರ್, ಸತ್ಯಜಿತ್ ಸುರತ್ಕಲ್ ಆಕಾಂಕ್ಷಿಗಳುಟಿ ಪ್ರಕಾಶ್ ಮೂಲ್ಕಿ
ಮೂಲ್ಕಿ: ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 1,69,000 ಮತದಾರರಿದ್ದು ಕಾಂಗ್ರೆಸ್,ನಿಂದ ನಾಲ್ಕನೆ ಬಾರಿಗೆ ಕೆ. ಅಭಯಚಂದ್ರ ಜೈನ್, ಜೆಡಿಎಸ್,ನಿಂದ ಹತ್ತನೆ ಬಾರಿಗೆ ಕೆ.ಅಮರನಾಥ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಸತ್ಯಜಿತ್ ಸುರತ್ಕಲ್ ಆಕಾಂಕ್ಷಿಗಳಾಗಿದ್ದು ಅಭ್ಯರ್ಥಿ ಆಯ್ಕೆ ಅಂತಿಮ ಹಂತದಲ್ಲಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಬಿಜೆಪಿಯ ಕೆಜೆಪಿ ಅತಿಕಾರಿ ಈ ಬಾರಿ ಟಿಕೆಟ್ ವಂಚಿತರಾಗಿದ್ದು ಕೆಜೆಪಿಯಿಂದ ಸ್ಫರ್ಧಿಸುವ ಸಾದ್ಯತೆಯಿದೆ. ಕೆಜೆಪಿಯಿಂದ ದಯಾನಂದ ಶೆಟ್ಟಿ ಕಡಂದಲೆ ಕೂಡ ಆಕಾಂಕ್ಷಿಯಾಗಿದ್ದಾರೆ. ಶೇಕಡಾ 30ಕ್ಕೂ ಹೆಚ್ಚು ಮತದಾರರಿರುವ ಬಿಲ್ಲವ ಸಮುದಾಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ಬಿದಿರೆ ಇತಿಹಾಸ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರವು 1951ರಿಂದ 1962ರವರೆಗೆ ಸುರತ್ಕಲ್ ಕ್ಷೇತ್ರದಲ್ಲಿದ್ದು 1951ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್,ನ ಬಿಲ್ಲವ ಸಮುದಾಯದ ಬಿ.ಆರ್ ಕರ್ಕೇರ ಪ್ರಜಾ ಸೋಷಲಿಸ್ಟ್ ಪಕ್ಷದ ಸ್ವಾತಂತ್ರ್ಯ ಹೋರಾಟಗಾರ ಬಂಟ ಸಮುದಾಯದ ಡಾ.ಕೆ. ಸಂಜೀವನಾಥ ಐಕಳರನ್ನು ಸೋಲಿಸಿ ಜಯಗಳಿಸಿದ್ದರು.
1957ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್,ನ ಬಿಲ್ಲವ ಸಮುದಾಯದ ಧೂಮಪ್ಪ ಪ್ರಜಾ ಸೋಷಲಿಸ್ಟ್ ಪಕ್ಷದ ಬಂಟ ಸಮುದಾಯದ ಡಾ. ಸಂಜೀವನಾಥ ಐಕಳರನ್ನು ಸೋಲಿಸಿ ಜಯಗಳಿಸಿದ್ದರು.  1962ರ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಬಂಟ ಸಮುದಾಯದ ಡಾ. ಸಂಜೀವನಾಥ ಐಕಳ ಸಂಸ್ಥಾ ಕಾಂಗ್ರೆಸ್,ನ ದೂಮಪ್ಪರನ್ನು ಸೋಲಿಸಿ ಜಯ ಗಳಿಸಿದ್ದರು. 1967ರ ಚುನಾವಣೆಯಲ್ಲಿ ಮೂಲ್ಕಿ- ಮೂಡುಬಿದಿರೆ ಕ್ಷೇತ್ರವಾಗಿ ಪರಿವರ್ತನೆಯಾಗಿದ್ದು 1967ರಲ್ಲಿ ಕಾಂಗ್ರೆಸ್,ನ ರತನ್ ಕುಮಾರ್ ಕಟ್ಟೆಮಾರ್ ಪ್ರಜಾ ಸೋಷಲಿಸ್ಟ್,ನ ಡಾ. ಸಂಜೀವನಾಥ ಐಕಳರನ್ನು ಸೋಲಿಸಿ  ಜಯಗಳಿಸಿದ್ದರು.
1972ರಲ್ಲಿ ಹಾಗೂ 1978ರಲ್ಲಿ  ಬಿಲ್ಲವ ಸಮುದಾಯದ ಡಾ.ದಾಮೋದರ ಮೂಲ್ಕಿ ಸಂಸ್ಥಾ ಕಾಂಗ್ರೆಸ್,ನ  ಕೆ.ಅಮರನಾಥ ಶೆಟ್ಟಿಯನ್ನು ಸೋಲಿಸಿ ಸತತವಾಗಿ ಜಯ ಗಳಿಸಿದ್ದರು. ದೇವರಾಜು ಅರಸು ಸಂಪುಟದಲ್ಲಿ 15 ದಿನಗಳ ಕಾಲ ಶಿಕ್ಷಣ ಸಚಿವರಾಗಿದ್ದರು.
ಕಾಂಗ್ರೆಸ್ ಆಂತರಿಕ ಕಚ್ಚಾಟ: 1983ರಲ್ಲಿ ಕಾಂಗ್ರೆಸ್,ನೊಳಗಿನ ಅಂತರಿಕ ಕಚ್ಚಾಟದಿಂದ ಬಿಲ್ಲವ ಸಮುದಾಯದ ಡಾ. ದಾಮೋದರ ಮೂಲ್ಕಿ ಅವರನ್ನು ಕೈಬಿಟ್ಟು ಕಾಂಗ್ರೆಸ್,ನಿಂದ ಬಿಲ್ಲವ ಸಮುದಾಯದ ಕೆ.ಸೋಮಪ್ಪ ಸುವರ,ರನ್ನು ಕಣಕ್ಕಿಳಿಸಿತು. ಚುನಾವಣೆಯಲ್ಲಿ ದಾಮೋದರ ಮೂಲ್ಕಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಅಮರನಾಥ ಶೆಟ್ಟಿಗೆ ಅಂತರಿಕ ಬೆಂಬಲ ನೀಡಿದ್ದರಿಂದ ಕೆ ಅಮರನಾಥ ಶೆಟ್ಟಿ ಕಾಂಗ್ರೆಸ್,ನ ಕೆ. ಸೋಮಪ್ಪ ಸುವರ,ರನ್ನು ಸೋಲಿಸಿ ಜಯ ಗಳಿಸಿದ್ದರು ಹಾಗೂ ರಾಮಕೃಷ, ಹೆಗಡೆ ಸಂಪುಟದಲ್ಲಿ ಧಾರ್ಮಿಕ ದತ್ತಿ ಸಚಿವರಾಗಿದ್ದರು.
1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಅಮರನಾಥ ಶೆಟ್ಟಿ ಕಾಂಗ್ರೆಸ್,ನ ದೇವದಾಸ್ ಕಟ್ಟೆಮಾರ್,ರನ್ನು ಸೋಲಿಸಿ ಸತತವಾಗಿ ಜಯಗಳಿಸಿದ್ದರು ಹಾಗೂ ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಮೀನುಗಾರಿಕಾ, ಬಂದರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
1989ರಲ್ಲಿ ಕಾಂಗ್ರೆಸ್ ಪಕ್ಷದಿಂದ ಪುನ ಸ್ಪರ್ಧಿಸಿದ್ದ ಕೆ. ಸೋಮಪ್ಪ ಸುವರ, ಜನತಾ ಪಕ್ಷದ ಕೆ. ಅಮರನಾಥ ಶೆಟ್ಟಿಯನ್ನು ಸೋಲಿಸಿದ್ದರು. 1994ರಲ್ಲಿ ಸಂಯುಕ್ತ ಜನತಾ ದಳದಿಂದ ಸ್ಪರ್ಧಿಸಿದ್ದ ಕೆ. ಅಮರನಾಥ ಶೆಟ್ಟಿ ಕಾಂಗ್ರೆಸ್,ನ ಕೆ. ಸೋಮಪ್ಪ ಸುವರ,ರನ್ನು ಸೋಲಿಸಿ ಜಯಗಳಿಸಿದ್ದರು. ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ಡಾ.ದಾಮೋದರ ಮೂಲ್ಕಿ ಕಾಂಗ್ರೆಸ್ ಪಕ್ಷದ ಮತಗಳನ್ನು ಗಳಿಸಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಕೆ. ಅಮರನಾಥ ಶೆಟ್ಟಿ ಜೆ.ಎಚ್ ಪಟೇಲ್ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದರು. 1999ರಲ್ಲಿ ಕಾಂಗ್ರೆಸ್,ನಿಂದ ಸ್ಫರ್ಧಿಸಿದ್ದ ಜೈನ್ ಜೆಡಿಎಸ್,ನ ಕೆ.ಅಮರನಾಥ ಶೆಟ್ಟಿಯನ್ನು ಸೋಲಿಸಿ ಜಯ ಗಳಿಸಿದ್ದರು. 2004ರ ಚುನಾವಣೆಯಲ್ಲಿ ಶೇ. 72 ಮತದಾನವಾಗಿತ್ತು. ಕಾಂಗ್ರೆಸ್ ಪಕ್ಷದ ಕೆ. ಅಭಯಚಂದ್ರ ಜೈನ್ 29,926, ಜೆಡಿಎಸ್,ನ ಕೆ. ಅಮರನಾಥ ಶೆಟ್ಟಿ 26,977 ಬಿಜೆಪಿಯ ಎಂ.ಎಸ್. ಕೋಟ್ಯಾನ್ 23,788 ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ರೋಬರ್ಟ್ ರೊಸಾರಿಯೋ 1,717 ಮತ ಪಡೆದಿದ್ದು ಕಾಂಗ್ರೆಸ್,ನ ಕೆ. ಅಭಯಚಂದ್ರ ಜೈನ್, ಜೆಡಿಎಸ್,ನ ಅಮರನಾಥ ಶೆಟ್ಟಿ ಎದುರು 2949 ಮತಗಳ ಅಂತರದಿಂದ ಜಯ ಗಳಿಸಿದ್ದರು.
ಜೈನ್ ಹ್ಯಾಟ್ರಿಕ್: 2008 ರ ಚುನಾವಣೆಯಲ್ಲಿ ಶೇಕಡಾ 72.27 ಮತದಾನವಾಗಿತ್ತು. ಕಾಂಗ್ರೆಸ್,ನ ಕೆ. ಅಭಯಚಂದ್ರ ಜೈನ್ 44744, ಬಿಜೆಪಿಯ ಕೆ.ಪಿ. ಜಗದೀಶ್ ಅಧಿಕಾರಿ 34,841, ಜೆಡಿಎಸ್,ನ ಕೆ. ಅಮರನಾಥ ಶೆಟ್ಟಿ 26083, ಪಕ್ಷೇತರರಾಗಿ ಸ್ಪರ್ಧಿಸಿದ್ದ ಡಿ.ಅರ್. ರಾಜ್ 1054, ಮಹಮ್ಮದ್ ಫಾರೂಕ್ 2297, ಸ್ಟೀವನ್ ವಿನ್ಸೆಂಟ್ 1984 ಮತ ಪಡೆದಿದ್ದು ಕಾಂಗ್ರೆಸ್,ನ ಕೆ. ಅಭಯಚಂದ್ರ ಜೈನ್ ಬಿಜೆಪಿಯ ಕೆ ಜಗದೀಶ್ ಪಿ. ಅತಿಕಾರಿ ಎದುರು 9903 ಮತಗಳ ಅಂತರದಿಂದ ಜಯಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ರಾಜ್ಯ ವಿಪಕ್ಷ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement