ಎಸ್ಎಸ್ಎಲ್ಸಿ ಫಲಿತಾಂಶ: ಶ್ರೀನಿಧಿ ಪ್ರಥಮ
ಕಾರ್ಕಳ: ಎಸ್ಎಸ್ಎಲ್ಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ನಗರದ ಭುವನೇಂದ್ರ ಹೈಸ್ಕೂಲ್ ವಿದ್ಯಾರ್ಥಿನಿ, ಬಜಗೋಳಿ ನಲ್ಲೂರುಕ್ರಾಸ್ ಶ್ರೀನಿಧಿ ಎಸ್. ಶೆಟ್ಟಿ 617 ಅಂಕ ಪಡೆದು ಕಾರ್ಕಳ ತಾಲೂಕಿಗೆ ಅಗ್ರಸ್ಥಾನ ಪಡೆಯುವ ಮೂಲಕ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ತಾಲೂಕು ಮಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನಗಳಿಸಿರುವ ಶ್ರೀನಿಧಿಗೆ ಭುವನೇಂದ್ರ ಹೈಸ್ಕೂಲ್ನ ಆಡಳಿತ ಮಂಡಳಿ, ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ, ಶಾಸಕ ಎಚ್. ಗೋಪಾಲ ಭಂಡಾರಿ, ಉದ್ಯಮಿ ರವಿಶಂಕರ್ ಶೇರುಗಾರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ. ಸಂತೋಷ್ ಕುಮಾರ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
--