ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜಿಲ್ಲೆಯಲ್ಲಿ ಲಕ್ಷಾಂತರ ವೆಚ್ಚದ ಸ್ವೀಪ್ ವಿಫಲ...?

Lingaraj Badiger
Updated On : 7 May 2013, 11:24 am

ಉಡುಪಿ: ಮತದಾನ ಮಾಡದೇ ಮನೆಯಲ್ಲಿ ಕೂರುವ ಮತದಾರರು ಹೇಗಾದರೂ ಮಾಡಿ ಮತಗಟ್ಟೆಗೆ ಬರುವಂತೆ ಮಾಡಬೇಕು ಎಂದು ಚುನಾವಣಾ ಆಯೋಗ ಹಾಕಿಕೊಂಡಿದ್ದ ಸ್ವೀಪ್  ಎಂಬ ಕಾರ್ಯಕ್ರಮ ವಿಫಲವಾಗಿದೆಯೇ...? ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಕಳೆದ ಬಾರಿಯ ಮತ್ತು ಈ ಬಾರಿಯ ಮತದಾನದ ಪ್ರಮಾಣವನ್ನು ಹೋಲಿಸಿದರೆ ಹೌದೆನ್ನಿಸುತ್ತಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 8,73,832 ಮತದಾರರಲ್ಲಿ 6,65,644 ಮಂದಿ ಮತದಾನ ಮಾಡಿದ್ದಾರೆ ಅಂದರೇ ಶೇ. 76.18ರಷ್ಟು ಮತದಾನ ನಡೆದಿದೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಶೇ. 75.63 ಮತದಾನವಾಗಿತ್ತು. ಅಂದರೇ ಶೇ. 0.55ರಷ್ಟು ಹೆಚ್ಚು ಮತದಾನ ಈ ಬಾರಿ ಆಗಿದೆ. ಇದು ನಿರೀಕ್ಷೆಗಿಂತ ಬಹಳ ಕಡಿಮೆ ಆಗಿದೆ.
ಜಿಲ್ಲಾ ಚುನಾವಣಾಧಿಕಾರಿ ಅವರು ಶೇ. 85ರಿಂದ ಶೇ. 90ರವರೆಗೆ ಮತದಾನವಾಗುತ್ತದೆ ಎಂದು ನಿರೀಕ್ಷಿಸಿದ್ದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಶೇ. 85ರಷ್ಟು ಮತದಾನವಾಗಬಹುದು ಎಂದಿದ್ದರು. ಆದರೆ, ಮತದಾನದ ಪ್ರಮಾಣ ನಿರೀಕ್ಷೆಯ ಹತ್ತಿರಕ್ಕೂ ಬಂದಿಲ್ಲ. ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ನಡೆಸಲಾದ ಸ್ವೀಪ್ ಕಾರ್ಯಕ್ರಮ ನಿರೀಕ್ಷಿತ ಫಲಿತಾಂಶ ನೀಡಿಲ್ಲ.
ಕ್ಷೇತ್ರವಾರು ಮತದಾನ ಹೀಗಿದೆ: ಬೈಂದೂರು ಕ್ಷೇತ್ರದಲ್ಲಿ 1,94,841 ಮತದಾರರಲ್ಲಿ 1,47,459 (ಶೇ. 75.68), ಕುಂದಾಪುರ ಕ್ಷೇತ್ರದಲ್ಲಿ 1,81,890 ಮತದಾರರಲ್ಲಿ 1,38107 (ಶೇ. 75.93), ಉಡುಪಿ ಕ್ಷೇತ್ರದಲ್ಲಿ 1,80,780 ಮತದಾರರಲ್ಲಿ 1,37,199 (ಶೇ. 75.89), ಕಾಪು ಕ್ಷೇತ್ರದಲ್ಲಿ 1,55,381 ಮತದಾರರಲ್ಲಿ 1,13,221 (ಶೇ. 72.86) ಮತ್ತು ಕಾರ್ಕಳ ಕ್ಷೇತ್ರದಲ್ಲಿ 1,60,940 ಮತದಾರರಲ್ಲಿ 1,29,658 (ಶೇ. 76.18) ಮತದಾನವಾಗಿದೆ.
ಕಾರ್ಕಳ, ಕುಂದಾಪುರ ಮತ್ತು ಬೈಂದೂರು ಕ್ಷೇತ್ರಗಳಲ್ಲಿರುವ ನಕ್ಸಲ್ ಬಾಧಿತ ಗ್ರಾಮಗಳ ಜನರು ಈ ಬಾರಿಯೂ ಅತ್ಯುತ್ತಮವಾಗಿ ಸ್ಪಂದಿಸಿದ್ದು, ಇಲ್ಲಿನ ಮತಗಟ್ಟೆಗಳಲ್ಲಿ ಶೇ. 80ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾನ ಕಾರ್ಕಳ ಕ್ಷೇತ್ರದ ಹೆಬ್ರಿಯ ಬಂಗಾರುಗುಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶೇ. 92.04 ಮತ್ತು ಜಿಲ್ಲೆಯಲ್ಲಿ ಅತೀ ಕಡಿಮೆ ಮತದಾನ ಬೈಂದೂರು ಕ್ಷೇತ್ರದ ಸರ್ಕಾರಿ ಹಿಂದೂಸ್ತಾನಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement