ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜೀಪು, ಕಾರು ಡಿಕ್ಕಿ: ಪಾದಚಾರಿ ಸಾವು

Lingaraj Badiger
Updated On : 7 May 2013, 11:24 am

ಉಡುಪಿ: ಇಲ್ಲಿನ ರಾ.ಹೆ. 66ರ ನಿಟ್ಟೂರು ಎಂಬಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಜೀಪು ಮತ್ತು ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಮೃತರು ರಾಜಪ್ಪ (40), ಅವರು ಇಲ್ಲಿನ ಪೂಜಾ ಮಾರ್ಬಲ್‌ನ ಬಳಿ ರಸ್ತೆ ದಾಟುತ್ತಿರುವಾಗ ಅತೀ ವೇಗದಿಂದ ಬಂದ ಜೀಪು ಡಿಕ್ಕಿ ಹೊಡೆಯಿತು. ಅದೇ ಸಮಯಕ್ಕೆ ಎದುರಿನಿಂದ ಬಂದ ಕಾರು ಕೂಡ ಜೀಪ್ ಮತ್ತು ರಾಜಪ್ಪ ಅವರಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ರಾಜಪ್ಪ ಅವರ ಕಾಲು, ಕೈ, ತಲೆಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಅವರನ್ನು ಶ್ರೀನಿವಾಸ ಪೂಜಾರಿ ಎಂಬವರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಗಾಯಾಳು ಅದಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಶ್ರೀನಿವಾಸ ಪೂಜಾರಿ ಅವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ಹುಡ್ಕೋ ಕಾಲೋನಿಯ ಇಮ್ಯಾನುವೆಲ್ ಮನೆಯ ಮಹಡಿಯಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ರಿತುರಾಜ್ ರಾಜಶ್ರೀ ರಾಮಸ್ವಾಮಿ (23) ಮೃತರು. ಇವರು ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಿಂದ ಹೊರಗೆ ಬಾರದೆ ಇರುವುದನ್ನು ಗಮನಿಸಿದ ಸಹಪಾಠಿ ವಿದ್ಯಾರ್ಥಿ ದೇಬರಾಜ್ ಎಂಬವರು ನೋಡಿದಾಗ ರಿತುರಾಜ್ ಅವರು ಮನೆಯೂಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ದೇಬರಾಜ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕುಸಿದು ವ್ಯಕ್ತಿ ಸಾವು
ಕಾರ್ಕಳ: ಇಲ್ಲಿನ ಬಜಗೋಳಿ ಕುದುರೆಮುಖ ಜಂಕ್ಷನಿನ ಬಳಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಶ್ರೀಕಾಂತ್ ರಾವ್ (50) ಮೃತರು. ಇವರು ಕುಂದಾಪುರದಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ರಾತ್ರಿ ವೇಳೆ ಮನೆಯ ಕಡೆಗೆ ಬಜಗೋಳಿಯ ಕುದುರೆಮುಖ ಜಂಕ್ಷನ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಕ್ತದೊತ್ತಡದ ತೊಂದರೆಯಿಂದಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಮಗಳು ಶ್ರೀನಿಧಿ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement