ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

10 ರಿಂದ 'ವಿಶ್ವೋತ್ತಮ' ರಾಷ್ಟ್ರೀಯ ಚಿತ್ರಕಲಾವಿದರ ಶಿಬಿರ

Mainashree
Updated On : 7 May 2013, 11:01 am

ಕನ್ನಡಪ್ರಭ ವಾರ್ತೆ ಉಡುಪಿ ಮೇ 7
ಪರ್ಯಾಯ ಸೋದೆ ಮಠದ ಆಶ್ರಯದಲ್ಲಿ ಉಡುಪಿ ಫೌಂಡೇಷನ್ ವತಿಯಿಂದ ಮೇ 10ರಿಂದ 14ರವರೆಗೆ 'ವಿಶ್ವೋತ್ತಮ' ರಾಷ್ಟ್ರೀಯ ಮಟ್ಟದ ಚಿತ್ರಕಲಾವಿದರ ಶಿಬಿರ ಇಲ್ಲಿನ ರಾಜಾಂಗಣದಲ್ಲಿ ನಡೆಯಲಿದೆ.
 ಈ ಬಗ್ಗೆ ಫೌಂಡೇಷನ್ ಅಧ್ಯಕ್ಷ ವಸಂತ ರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಶಿಬಿರದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ 24 ಚಿತ್ರ ಕಲಾವಿದರು ಭಾಗವಹಿಲಿದ್ದಾರೆ. ಅವರೆಲ್ಲರೂ 'ಭೂವರಹಾ', 'ಹಯಗ್ರೀವ' ಎಂಬ ಎರಡು ವಿಷಯಗಳ ಬಗ್ಗೆ ಎರಡೆರಡು ಚಿತ್ರಗಳನ್ನು ಬರೆಯಲಿದ್ದಾರೆ. ಶಿಬಿರದ ನಂತರ ಈ ಚಿತ್ರಗಳನ್ನು ಉತ್ತರ ಕನ್ನಡ ಜಿಲ್ಲೆಯ ಸೊಂದಾ ಗ್ರಾಮದಲ್ಲಿರುವ ಸೋದೆ ಮೂಲಮಠದಲ್ಲಿ ಸ್ಥಾಪಿಸಲಾಗುವ ಆರ್ಟ್ ಗ್ಯಾಲರಿಯಲ್ಲಿ ಶಾಶ್ವತವಾಗಿ ಪ್ರದರ್ಶನಕ್ಕಿಡಲಾಗುವುದು ಎಂದರು.
 ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇಷ್ಟು ದೊಡ್ಡ ಕಲಾ ಶಿಬಿರ ನಡೆಯಲಿದ್ದು, ಯಾರದ್ದೇ ಧಾರ್ಮಿಕ ಭಾವನೆಗಳಿಗೆ ನೋವಾಗದಂತೆ ಈ ಚಿತ್ರಗಳನ್ನು ರಚಿಸುವುದಕ್ಕೆ ಕಲಾವಿದರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಚರ್ಚೆ, ಸಂವಾದ: ಕಲಾವಿದರು 9ರಂದೇ ಉಡುಪಿಗೆ ಆಗಮಿಸಲಿದ್ದಾರೆ. ಅಂದು ಕಲಾವಿದರ ನಡುವೆ ಚರ್ಚೆ, ಸಂವಾದಗಳಿಗೆ ಅವಕಾಶ ಮಾಡಿಕೊಡಲಾಗುವುದು. 10ರಂದು ಬೆಳಗ್ಗೆ 8.30ಕ್ಕೆ ಸೋದೆ ಶ್ರೀಗಳು ರಾಜಾಂಗಣದಲ್ಲಿ ಈ ಶಿಬಿರ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಹೈದರಾಬಾದ್‌ನ ಹಿರಿಯ ಕಲಾವಿದ ಪಿ. ಗೌರಿಶಂಕರ್ ಮತ್ತು ಮಂಗಳೂರು ಮಹಾಲಸಾ ಸ್ಕೂಲ್ ಆಫ್ ಆರ್ಟ್ಸ್‌ನ ಮುಖ್ಯಸ್ಥ ಎನ್.ಎಸ್. ಪತ್ಥಾರ್ ಉಪಸ್ಥಿತರಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement