ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ: ತಬಲಾ ಕಾರ್ಯಗಾರ

Vishwanath S
Updated On : 11 May 2013, 11:18 am

ಉಡುಪಿ: ಇಲ್ಲಿನ ಬಡಗುಪೇಟೆಯ ಮುಕುಂದಾಕೃಪಾ ಶಾಲೆಯ ಸಂಗೀತ ಅಕಾಡೆಮಿ ಮತ್ತು ಕನಕ ಅಧ್ಯಯನ ಪೀಠದ ವತಿಯಿಂದ ತಬಲಾವಾದನ ಆಸಕ್ತರಿಗಾಗಿ 3 ದಿನಗಳ ವಿಶೇಷ ಕಾರ್ಯಾಗಾರವನ್ನು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಫಾರೂಖಾಬಾದ್ ಘರಾನಾದ ಖ್ಯಾತ ತಬಲಾವಾದಕ ಪಂಡಿತ್ ನಯಂಪಳ್ಳಿ ಮುಂಬೈ ಈ ವಿಶೇಷ ಶಿಬಿರವನ್ನು ನಡೆಸಿಕೊಡಲಿದ್ದಾರೆ.
 ಈ ಶಿಬಿರವನ್ನು ಶುಕ್ರವಾರ ಸಂಗೀತ ವಿಮರ್ಶಕರಾದ ಮಣಿಪಾಲ ಉಡುಪಿ ಈಶ್ವರಯ್ಯ ಉದ್ಘಾಟಿಸಿದರು.
 ಕನಕ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಹೇರೆಂಜೆ ಕೃಷ್ಣ ಭಟ್ ಅತಿಥಿಗಳನ್ನು ಸ್ವಾಗತಿಸಿದರು.
 ತಬಲಾ ಕಲಾವಿದ ಟಿ. ರಂಗ ಪೈ ಮಣಿಪಾಲ ಇವರು ಕಾರ್ಯಕ್ರಮ ನೆರವೇರಿಸಿದರು. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಂದ ಅನೇಕ ಮಂದಿ ಆಸಕ್ತರು ಈ ಶಿಬಿರದಲ್ಲಿ ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement