ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಎಚ್‌ಐವಿ ಪೀಡಿತರೊಂದಿಗೆ ಉತ್ತಮ ಒಡನಾಟ ಬೆಳೆಸಿಕೊಳ್ಳಿ: ಫಾ. ವಿಲಿಯಂ ಮಾರ್ಟಿಸ್

Vishwanath S
Updated On : 11 May 2013, 11:18 am

ಉಡುಪಿ: ಮಾನಸಿಕವಾಗಿ ನೊಂದಿರುವ ಎಚ್‌ಐವಿ ಪೀಡಿತರನ್ನು ಕೀಳಾಗಿ ಕಾಣದೆ ಅವರೊಂದಿಗೆ ಉತ್ತಮ ಒಡನಾಟವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಎಲ್ಲರಂತೆ ಬದುಕಲು ಸಹಾಯವಾಗುವಂತ ವಾತವರಣ ಕಲ್ಪಿಸಿ ಕೊಡಿ ಎಂದು ಧರ್ಮಗುರುಗಳಾದ ಫಾ. ವಿಲಿಯಂ ಮಾರ್ಟಿಸ್ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಲಯನ್ಸ್ ಭವನದಲ್ಲಿ ಭಾರತೀಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ ಉಚಿತ ನೋಟ್‌ಬುಕ್ ವಿತರಣೆ ಹಾಗೂ ಏಡ್ಸ್ ಜಾಗೃತಿ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆರೋಗ್ಯ ಇಲಾಖೆಯ ಏಡ್ಸ್ ನಿರ್ಮೂಲನೆ ಮುಖ್ಯಸ್ಥ ಡಾ. ಅಶೋಕ್, ಲಯನ್ಸ್ ಜಿಲ್ಲಾ ಗವರ್ನರ್ ಮಧುಸೂಧನ ಹೆಗ್ಡೆ ಮತ್ತವರ ಪತ್ನಿ ಶೋಭಾ ಹೆಗ್ಡೆ, ಭಾರತೀಯ ಕುಟುಂಬ ಯೋಜನಾ ಇಲಾಖೆಯ ಕಾರ್ಯದರ್ಶಿ ಪ್ರೊ. ಹರಿಣಿ ದಾಮೋದರ್, ಲಯನ್ಸ್ ಅಧ್ಯಕ್ಷ ಜೋಸೆಫ್‌ಮಾಥ್ಯೂ, ಪ್ರಸಾದ್ ನೇತ್ರಾಲಯದ ಡಾ. ಶಂಶೀರ್, ಲಯನ್ಸ್ ಕ್ಲಬ್‌ನ ಸದಸ್ಯೆ ರಮ್ಯ ರವಿರಾಜ್, ಕಾರ್ಯಕ್ರಮದ ಪ್ರಾಯೋಜಕರಾದ ವಿಶ್ವನಾಥ್ ಮಲ್ಪೆ ಮತ್ತು ಉಮೇಶ್ ಕಲ್ಮಾಡಿ ಮತ್ತಿತರರು ಇದ್ದರು.
ಭಾರತೀಯ ಕುಟುಂಬ ಯೋಜನಾ ಇಲಾಖೆಯ ಅಧ್ಯಕ್ಷ ಅಧ್ಯಕ್ಷ ಪ್ರಕಾಶ್ ಅಂದ್ರಾದೆ ಸ್ವಾಗತಿಸಿದರು. ರಮೇಶ್ ಪ್ರಾರ್ಥಿಸಿದರು. ದೇವರಾಜ್ ಮೂರ್ತಿ ನಿರೂಪಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪೌಷ್ಟಿಕ ಆಹಾರ, ಬಟ್ಟೆ ಹಾಗೂ ಬಡಕುಟುಂಬದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement