ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಕೋಟಿ ಚೆನ್ನಯ ಚರಿತ್ರೆ' ಧಾರಾವಾಹಿ ನಾಳೆಯಿಂದ ಪ್ರಸಾರ

Vishwanath S
Updated On : 11 May 2013, 11:19 am

ಉಡುಪಿ: ತುಳುನಾಡಿನ ಅಮರವೀರರಾದ ಕೋಟಿ ಚೆನ್ನಯರ ಕಥೆಯನ್ನು ವಿಶ್ವಾದ್ಯಂತ ಜನರಿಗೆ ತಲುಪಿಸುವ ಉದ್ದೇಶದಿಂದ ಅವರ ಚರಿತ್ರೆಯನ್ನು ಕನ್ನಡ ಮತ್ತು ತುಳುಭಾಷೆ ಧಾರವಾಹಿಯಾಗಿ ಚಿತ್ರೀಕರಿಸಲಾಗಿದ್ದು, ಮೇ 12ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ 9.30ರವರೆಗೆ ಕನ್ನಡದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಕೋಟಿ ಚೆನ್ನಯ ಧಾರಾವಾಹಿಯ ನಿರ್ಮಾಪಕ ಅಶೋಕ್ ಎಂ. ಸುವರ್ಣ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಧಾರಾವಾಹಿಯು ಸುಮಾರು 30 ಜನಪದ ಹಾಡುಗಳನ್ನು ಚಿತ್ರೀಕರಿಸಲಾಗಿದ್ದು, ಚಂದ್ರಹಾಸ ಆಳ್ವ ಈ ಧಾರಾವಾಹಿ ನಿರ್ದೇಶಿಸಿದ್ದಾರೆ. ತುಳು ಸಂಶೋಧಕ ಡಾ.ಬಿ.ಎ. ವಿವೇಕ್ ರೈ, ಸಾಹಿತಿಗಳಾದ ಅಮೃತ ಸೋಮೇಶ್ವರ ಹಾಗೂ ಗಣೇಶ್ ಅಮೀನ್ ಸಂಕಮಾರ್, ವಾಮನ ನಂದಾವರ ಹಾಡುಗಳನ್ನು ಕನ್ನಡದಲ್ಲಿ ಸಂಯೋಜಿಸಿದ್ದಾರೆ. ವಿಶ್ವಾದ್ಯಂತ ಸುಮಾರು 72 ದೇಶಗಳಲ್ಲಿ ಉಪಗ್ರಹದ ಮೂಲಕ ಈ ಧಾರಾವಾಹಿ ಪ್ರಸಾರ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುತ್ಯಾರು ಕೇಂಜಾರು ಗರೋಡಿಯ ಮುಖ್ಯಸ್ಥ ಉಮೇಶ್ ಎನ್. ಕೋಟ್ಯಾನ್, ಕಲಾವಿದರಾದ ಪ್ರದೀಪ್, ಪೂರ್ಣಿಮಾ ಸುರೇಶ, ಉದಯಕುಮಾರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement