ಮಾನವ ಹಕ್ಕು ಜಾಗೃತಿ - ಉಪನ್ಯಾಸ
ಉಡುಪಿ: ಬಂಟಕಲ್ಲಿನಲ್ಲಿರುವ ಶ್ರೀ ಮಧ್ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ - ಮಾನವ ಹಕ್ಕುಗಳ ಬಗ್ಗೆ ಜಾಗೃತಿ - ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಬಳಕೆದಾರರ ಮತ್ತು ಮಾನವ ಹಕ್ಕುಗಳ ಅಭಿಯಾನದ ರೂವಾರಿ, ಪ್ರಖ್ಯಾತ ಅಂಕಣಕಾರ ಡಾ. ರವೀಂದ್ರನಾಥ ಶಾನುಭೋಗ ನಾಗರಿಕರು ತಮ್ಮ ಹಕ್ಕುಗಳ ಅರಿವಿನಿಂದಾಗಿ ಸಮಾಜದಲ್ಲಿ ತರಬಹುದಾದ ಬದಲಾವಣೆಯನ್ನು ವಿವಿಧ ಉದಾಹರಣೆಗಳ ಮೂಲಕ ವಿವರಿಸಿದರು.
ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ರತ್ನಕುಮಾರ್, ಸಂಸ್ಥೆಯ ಪ್ರಾಂಶುಪಾಲ ಪ್ರೊ. ಡಾ. ರಾಧಾಕೃಷ್ಣ ಎಸ್. ಐತಾಳ್ ಉಪಸ್ಥಿತರಿದ್ದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಿ. ರಾಧೇಶ್ಯಾಮ್ ಸ್ವಾಗತಿಸಿ ವಂದಿಸಿದರು.