ರಸ್ತೆ ಬದಿ, ಚರಂಡಿಯಲ್ಲಿಟ್ಟಿರುವ ಕಟ್ಟಡ ಸಾಮಗ್ರಿ ತೆರವಿಗೆ ಸೂಚನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ದುರಸ್ತಿ ಹಾಗೂ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ಮಾಲೀಕರು ಕಟ್ಟಡದ ಸಾಮಗ್ರಿಗಳನ್ನು ರಸ್ತೆ ಬದಿ ಹಾಗೂ ಚರಂಡಿಗಳಲ್ಲಿ ಸಂಗ್ರಹಿಸಿರುವುದು ಕಂಡು ಬಂದಿದೆ.
ಇದರಿಂದಾಗಿ ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಅಡಚಣೆ ಉಂಟಾಗುತ್ತಿದ್ದು, ಈ ಕೂಡಲೇ ರಸ್ತೆ ಬದಿ ಹಾಗೂ ಚರಂಡಿಗಳಲ್ಲಿ ಸಂಗ್ರಹಿಸಿರುವ ಕಟ್ಟಡ ಸಾಮಗ್ರಿಗಳನ್ನು ತೆರವು ಮಾಡಬೇಕು.
ತಪ್ಪಿದಲ್ಲಿ ಸಂಬಂಧಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಗೋಕುಲ್ ದಾಸ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.