108 ತೆಂಗಿನಕಾಯಿ ಒಡೆದು ಸಂಭ್ರಮ
ಉಡುಪಿ: ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ 11.40ಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಇತ್ತ ಉಡುಪಿ ತಾಲೂಕಿನ ಪರ್ಕಳದ ಮಹಾಲಿಂಗೇಶ್ವರ ಮಹಾಗಣಪತಿ ದೇವಾಲಯದಲ್ಲಿ ಅವರ ಅಭಿಮಾನಿಗಳು 108 ತೆಂಗಿನ ಕಾಯಿಗಳನ್ನು ಒಡೆದು ಸಂತಸ ವ್ಯಕ್ತಪಡಿಸಿದರು.
ಚುನಾವಣೆಗೂ ಮುನ್ನವೇ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಈ ದೇವಾಲಯದಲ್ಲಿ ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ಹಾರೈಕೆ ಈಡೇರಿದ ಖುಷಿಯಲ್ಲಿ ದೇವರಿಗೆ ಕೃತಜ್ಞಪೂರ್ವಕವಾಗಿ ಮತ್ತೆ ತೆಂಗಿನ ಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿ ದೇವಳಕ್ಕೆ ದೀಪದ ಎಣ್ಣೆ ನೀಡಿದರು. ಉಡುಪಿ ನಗರಸಭೆ ಮಾಜಿ ಸದಸ್ಯ ರಾಮದಾಸ ನಾಯಕ್, ಹೊಟೇಲ್ ಉದ್ಯಮಿ ಮೋಹನ್ದಾಸ್ ನಾಯಕ್, ಗಣೇಶ್ರಾಜ್, ಗೋಪಾಲಕೃಷ್ಣ ಆಚಾರ್ಯ, ಸುಧಾಕರ ಸೇರಿಗಾರ್, ಬ್ರಹ್ಮಾವರ ಸೇವಾದಳ ಅಧ್ಯಕ್ಷ ಕಿರಣ್ರಾಜ್, ಸುಬ್ರಹ್ಮಣ್ಯ ಪಾಟೀಲ್, ಮುಬೀನ್, ಸಿದ್ದಿಕ್, ಗೋಪಾಲ ನಾಯಕ್, ದೇವೆಂದ್ರ ನಾಯ್ಕ್, ಉಷಾ ಪೂಜಾರಿ, ಸುಪ್ರೀತ, ಚಂದ್ರಿಕಾ ಮತ್ತಿತರರು ಭಾಗವಹಿಸಿದ್ದರು.