ಬೆಳ್ಳಾರೆ: ಕಾಂಗ್ರೆಸ್ ವಿಜಯೋತ್ಸವ
ಸುಳ್ಯ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಹಿನ್ನಲೆಯಲ್ಲಿ ಬೆಳ್ಳಾರೆಯ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಬೆಳ್ಳಾರೆ ಬಸ್ ನಿಲ್ದಾಣದ ಬಳಿ ಸೇರಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಕಾಮತ್, ತಾಲೂಕು ಪಂಚಾಯಿತಿ ಸದಸ್ಯ ಅನಿಲ್ ರೈ, ಎಂ. ಮಾಧವ ಗೌಡ, ಗ್ರಾ.ಪಂ. ಅಧ್ಯಕ್ಷ ವಿಠಲದಾಸ್, ರಾಜೀವಿ ರೈ, ಸುನಿಲ್ ರೈ ಪುಡ್ಕಜೆ, ಆನಂದ ಬೆಳ್ಳಾರೆ, ಅಂದುಂಞ ಬೆಳ್ಳಾರೆ, ಸಚಿನ್ರಾಜ್ ಶೆಟ್ಟಿ, ಆದಂ ಕುಂಞ, ಕಂದಸ್ವಾಮಿ, ವಾರಿಜ, ಹಸನ್, ವೆಂಕಪ್ಪ ಗೌಡ, ಸದಾನಂದ ರೈ, ಮಜೀದ್, ಪುರಂದರ ಕುಲಾಲ್, ಬೀಬಿ ಪೆರುವಾಜೆ, ದಿವಾಕರ ರೈ, ರಾಮದಾಸ್ ರೈ, ಇಲ್ಯಾಸ್ ಪಾಜಪಳ್ಳ ಮುಂತಾದವರು ಇದ್ದರು.