ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅವರು ಹಾರ್ಡ್‌ವರ್ಕರ್, ಜನರ ಕೆಲಸದಲ್ಲಿ ಉದಾಸೀನತೆ ತೋರಲ್ಲ

Vishwanath S
Updated On : 19 May 2013, 11:47 am

ಬಂಟ್ವಾಳ: 'ನನ್ನ ಪತಿ ಹಾರ್ಡ್‌ವರ್ಕರ್. ಜನರ ಕೆಲಸ ಮಾಡುವುದರಲ್ಲಿ ಅವರಿಗೆ ಉದಾಸೀನತೆ ಇಲ್ಲ. ಅವರು ಮಾಡಿರುವ ಕೆಲಸಗಳೇ ಅವರಿಗೆ ಪ್ಲಸ್ ಪಾಯಿಂಟ್‌'.
 ಬಂಟ್ವಾಳ ಶಾಸಕರಾಗಿ, ರಾಜ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ. ರಮಾನಾಥ ರೈ ಅವರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡವರು ಅವರ ಪತ್ನಿ ಧನಭಾಗ್ಯ ಆರ್. ರೈ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
'ಪತಿಯ ಅನುಭವ, ಜನ ಸೇವೆಯನ್ನು ಗುರುತಿಸಿ ಸರ್ಕಾರದಲ್ಲಿ ಉತ್ತಮ ಖಾತೆಯೇ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ಮುಂದಿನ ದಿನಗಳಲ್ಲಿ ಮನೆಗೆ ಜಾಸ್ತಿ ಸಮಯ ಕೊಡದಿದ್ದರೂ ಚಿಂತೆ ಇಲ್ಲ. ಅವರು ಜನರೊಂದಿಗೆ ಇದ್ದು ಅವರ ಸೇವೆ ಮಾಡುವುದರಲ್ಲೇ ಖುಷಿ ಪಡುತ್ತೇನೆ' ಎನ್ನುತ್ತಾರೆ.  ಏಳು ಬಾರಿ ಸ್ಪರ್ಧೆ ಮಾಡಿದ್ದಾರೆ. ಆರು ಬಾರಿ ಗೆದ್ದಿದ್ದಾರೆ, ಜನಸೇವೆಯಲ್ಲಿಯೇ ಖುಷಿ ಕಾಣುವ ಅವರು ಚುನಾವಣೆಯಲ್ಲಿ ಒಮ್ಮೆ ಸೋತರೂ ಧೃತಿಗೆಡಲಿಲ್ಲ. ಇಲ್ಲಿಗೆ ಆಗಲೂ ಜನ ಬರುತ್ತಿದ್ದರು. ಸೋಲನ್ನು ಅವರು ಸವಾಲಾಗಿ ಸ್ವೀಕರಿಸಿದ್ದರು. ಹಾಗೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಗೆಲುವಾಯಿತು ಎನ್ನುತ್ತಾರೆ ಧನಭಾಗ್ಯ ರೈ.
ಮನೆಗೂ ಸಮಯ ಕೊಡುತ್ತಾರೆ...: ಅವರ ಸಾಕಷ್ಟು ಒತ್ತಡದ ಮಧ್ಯೆಯೂ ಮನೆಗೂ ಒಂದಷ್ಟು ಸಮಯ ಕೊಡುತ್ತಾರೆ. ಪತ್ನಿ, ಮಕ್ಕಳೊಂದಿಗೆ ಕಳೆಯುತ್ತಾರೆ. ಅವರು ಎಷ್ಟೇ ದೂರದಲ್ಲಿರಲಿ, ಮನೆಗೆ ಒಂದು ಬಾರಿಯಾದರೂ ದೂರವಾಣಿ ಮೂಲಕ ಸಂಪರ್ಕಿಸಿ ಕ್ಷೇಮಸಮಾಚಾರ ವಿಚಾರಿಸುತ್ತಾರೆ. ಮನೆ ಮಂದಿಯ ಕುಟುಂಬದ ಕಾರ್ಯಕ್ರಮಗಳಲ್ಲೂ ನಾವು ಒಟ್ಟಾಗಿ ಭಾಗವಹಿಸುತ್ತೇವೆ ಎನ್ನುತ್ತಾರೆ.
 ರಾತ್ರಿ ಎಷ್ಟೇ ಹೊತ್ತಿಗೆ ಮನೆಗೆ ಬಂದರೂ ಕುಳಿತುಕೊಂಡು ಎಲ್ಲ ಪೇಪರ್ ಓದುತ್ತಾರೆ. 2, 3 ಗಂಟೆಯಾಗಿದ್ದರೂ ಟಿವಿ ಹಚ್ಚಿ ನ್ಯೂಸ್, ಯಕ್ಷಗಾನ, ಕ್ರೀಡೆಗಳನ್ನು ನೋಡುತ್ತಾರೆ. ಕ್ರಿಕೆಟ್ ತುಂಬಾ ಅಚ್ಚುಮೆಚ್ಚು. ಕ್ರಿಕೆಟ್ ಇರುವಾಗ ಟಿವಿಯಲ್ಲಿ ನೋಡಿ ಸಂಭ್ರಮಿಸುತ್ತಾರೆ ಎಂದು ತನ್ನ ಪತಿಯ ಬಗ್ಗೆ ಅಭಿಮಾನದಲ್ಲಿ ಹೇಳಿಕೊಂಡರು ಧನಭಾಗ್ಯ ಆರ್.ರೈ. ಬೆಳ್ಳಿಪ್ಪಾಡಿ ರಮಾನಾಥ ರೈಯವರ ತಂದೆ ಬೆಳ್ಳಿಪ್ಪಾಡಿ ನಾರಾಯಣ ರೈ, ತಾಯಿ ಗಿರಿಜಾ .ಎನ್ ರೈ, ಪತ್ನಿ ಧನಭಾಗ್ಯ ರೈ, ಮಗ ಚೈತ್ರದೀಪ್ ರೈ ಹಾಗೂ ಮಗಳು ಚರಿಷ್ಮಾ ರೈ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement