ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೋಶಿಕಾ ವಸಂತ ಶಿಬಿರ ಮುಕ್ತಾಯ

Vishwanath S
Updated On : 19 May 2013, 11:45 am

ಕೋಟ: ಇಂದಿನ ಮಕ್ಕಳಿಗೆ ಯಾವುದೇ ಕ್ಷೇತ್ರದಲ್ಲಿಯೂ ಪ್ರೋತ್ಸಾಹಕ್ಕೆ ಕೊರತೆ ಇಲ್ಲ. ಆದರೆ, ಸಿಗುವ ಪ್ರೋತ್ಸಾಹದ ಸದುಪಯೋಗವಾಗಬೇಕು ಎಂದು ಇಲ್ಲಿನ ಡಾ. ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಸಂಸ್ಥೆಯ ನಿರ್ದೇಶಕಿ ಮಾಲಿನಿ ಮಲ್ಯ ತಿಳಿಸಿದರು.
ಅವರು ಕೋಶಿಕಾ ವಸಂತ ಶಿಬಿರ - 16ರ ಸಮಾರೋಪ ಸಮಾರಂಭದಲ್ಲಿ ರಂಗ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ಪರಭಾಷೆ ನಾಟಕ ಕೃತಿಗಳನ್ನು ಇಂತಹ ಶಿಬಿರಗಳಲ್ಲಿ ತಿಳಿಸಿದರೆ ಶಿಬಿರಾರ್ಥಿಗಳಲ್ಲಿ ಪರಿಣಾಮಕಾರಿಯಾಗಿ ಅನ್ಯಭಾಷಾ ಸಾಹಿತ್ಯದ ಬಗೆಗೂ ತಿಳುವಳಿಕೆ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕ ನರಸಿಂಹ ಬಾಯಿರಿ ಮತ್ತು ಪೇತ್ರಿಯ ಧರ್ಮಗುರು ಸುನಿಲ್ ಡಿ' ಸಿಲ್ವ ಇದ್ದರು.
ಪ್ರಾರಂಭದಲ್ಲಿ ಕೋಶಿಕಾದ ಗೀತಾ ಸಾಮಂತ್ ಸ್ವಾಗತಿಸಿದರು, ರಮಾನಂದ ಪಾಟೀಲ್ ಸರ್ಪು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement