ಉಚ್ಚಿಲ: ದಂತ ಚಿಕಿತ್ಸಾ ಶಿಬಿರ
ಪಡುಬಿದ್ರಿ: ಇಲ್ಲಿನ ಅಲ್- ಇಸ್ಲಾಮಿಯಾ ಯಂಗ್ಮೆನ್ ಎಸೋಸಿಯೇಶನ್ ಮತ್ತು ರಿಫಾಯಿಯ ದಫ್ ಕಮಿಟಿ ನೇತೃತ್ವದಲ್ಲಿ ಮಣಿಪಾಲದ ಕೆಎಂಸಿ ದಂತ ಮಹಾ ವಿದ್ಯಾಲಯದ ತಜ್ಞ ವೈದ್ಯರಿಂದ ಉಚ್ಚಿಲ ಭಾಸ್ಕರ ನಗರ ಸೈಯ್ಯದ್ ಅರಬಿ ಜುಮ್ಮಾ ಮಸೀದಿ ವಠಾರದಲ್ಲಿ ಭಾನುವಾರ ದಂತ ಉಚಿತ ಚಿಕಿತ್ಸಾ ಶಿಬಿರ ನಡೆಯಿತು.
ಮೂಳೂರು ಜುಮಾ ಮಸೀದಿ ಧರ್ಮಗುರು ಅಶ್ರಫ್ ರಝಾ ಹಂಝಾದಿ ಉದ್ಘಾಟಿಸಿದರು. ಮಣಿಪಾಲ ಕೆಎಂಸಿ ದಂತ ಮಹಾ ವಿದ್ಯಾಲಯದ ವೈದ್ಯಾಧಿಕಾರಿ ಡಾ. ಕಲ್ಯಾಣ್ ಮಾತನಾಡಿ, ಈ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಗುರುತು ಚೀಟಿ ನೀಡುತ್ತೇವೆ. ಸಣ್ಣ ಚಿಕಿತ್ಸೆಗಳನ್ನು ಇಲ್ಲಿಯೇ ಮಾಡುತ್ತೇವೆ. ಒಂದು ತಿಂಗಳೊಳಗೆ ಮಣಿಪಾಲದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಮಾಡುತ್ತೇವೆ ಎಂದರು.
ಈ ಸಂದರ್ಭ ರಫೀಕ್ ಎಸ್.ಕೆ., ಇಕ್ಬಾಲ್, ಮೊಯಿದ್ದೀನ್, ಮಣಿಪಾಲ ಕೆಎಂಸಿ ವೈದ್ಯಾಧಿಕಾರಿಗಳಾದ ಡಾ. ಶ್ರೀಕಾಂತ್, ಡಾ. ಕಲ್ಯಾಣ್, ಇಬ್ರಾಹಿಂ ಉಮ್ಮರ್ ವೇದಿಕೆಯಲ್ಲಿದ್ದರು.