ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರಾಜಾಂಗಣದಲ್ಲಿ 'ಕಾಳಗ ಸಪ್ತಕ' ಉದ್ಘಾಟನೆ

Lingaraj Badiger
Updated On : 21 May 2013, 11:51 am

ಉಡುಪಿ: ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವುದಲ್ಲ, ಬದಲಾಗಿ ಜನರನ್ನು ಆಧ್ಯಾತ್ಮಿಕ ಉನ್ನತಿಯತ್ತ ಕೊಂಡೊಯ್ಯುವ, ಸಮಾಜದಲ್ಲಿ ಯೋಗ್ಯ ವ್ಯಕ್ತಿಯನ್ನಾಗಿಸುವ ಕಲೆಯಾಗಿದೆ. ಈ ಕಲೆಗಿಂತ ದೊಡ್ಡ ಸಮಾಜ ಸೇವೆ ಮತ್ತೊಂದಿಲ್ಲ ಎಂದು ಭಟ್ಕಳದ ಖ್ಯಾತ ವೈದ್ಯ ಡಾ. ಪಾಂಡುರಂಗ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಶ್ರೀಕೃಷ್ಣ ಮಠ, ಸೋದೆ ವಾದಿರಾಜ ಮಠ, ಯಕ್ಷಗಾನ ಕಲಾರಂಗ ಹಾಗೂ ಕರ್ನಾಟಕ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ 'ತಾಳಮದ್ದಲೆ ಸಪ್ತಾಹ- ಕಾಳಗ ಸಪ್ತಕ' ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು.
ಟೆಬ್ಮಾ ಮುಖ್ಯ ಸಮುದಾಯ ಸಂಪರ್ಕಾಧಿಕಾರಿ ಪಿ. ರಾಮದಾಸ ಭಟ್ ಸಮಾರಂಭ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಗಂಗಾಧರ ರಾವ್ ಇದ್ದರು. ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಮಹಾಬಲ ಹೆಗಡೆ ನಿರೂಪಿಸಿದರು. ಎಚ್.ಎಂ. ವೆಂಕಟೇಶ ವಂದಿಸಿದರು.
ಬಳಿಕ ಕುರಿಯ ಗಣಪತಿ ಶಾಸ್ತ್ರಿ ಮತ್ತು ಎಂ.ಆರ್. ವಾಸುದೇವ ಬಳಗದವರಿಂದ 'ಕಾರ್ತಾವೀರ್ಯಾರ್ಜುನ ಕಾಳಗ' ತಾಳಮದ್ದಲೆ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement