ಮಲ್ಪೆ ಪ್ರವಾಸಿಗರ ಜೀವರಕ್ಷಣೆಗೆ ವ್ಯವಸ್ಥೆ
ಇತ್ತೀಚೆಗೆ ಮಲ್ಪೆ ಸಮುದ್ರದಲ್ಲಿ ಈಜಲು ಹೋದ ಮಹಿಳೆ ನೀರು ಪಾಲಾದ ಮತ್ತು ವಿಹಾರದ ಬೋಟ್ ಮಗುಚಿ ಮಗು ಸಾವಿಗೀಡಾದ ಎರಡು ದುರಂತಗಳ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಪ್ರವಾಸಿಗರ ಜೀವರಕ್ಷಣೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಕಡಲ ತೀರದ ಪ್ರವಾಸಿಗರ ಜೀವರಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಬೋಟುಗಳಲ್ಲಿ ಅಳವಡಿಸುವಂತೆ, ಅಲ್ಲದೆ ಸಮುದ್ರದಲ್ಲಿ ಈಜುವವರಿಗೆ ಸಮುದ್ರ ದಡದಲ್ಲಿ ಬೇಕಾದ ಜೀವರಕ್ಷಕ ವ್ಯವಸ್ಥೆಯನ್ನು ಮಾಡುವುದಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕರು ಜಿಲ್ಲಾಧಿಕಾರಿಗಳಲ್ಲಿ ಚರ್ಚೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.