ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಂಕನಾಡಿ ರೇಲ್ವೆ ನಿಲ್ದಾಣಕ್ಕೆ ನಗರ ಸಾರಿಗೆಗೆ ಸೂಚನೆ

Mainashree
Updated On : 27 May 2013, 11:19 am

ಮಂಗಳೂರು: ಕಂಕನಾಡಿ ರೇಲ್ವೆ ನಿಲ್ದಾಣಕ್ಕೆ(ಮಂಗಳೂರು ಜಂಕ್ಷನ್)ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ದ.ಕ.ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಜಂಕ್ಷನ್ ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೋ ರಿಕ್ಷಾ ಸೌಲಭ್ಯ ಒದಗಿಸುವಂತೆ ಕೋರಿ ನೈಋತ್ಯ ರೇಲ್ವೆ ಮೈಸೂರು ವಿಭಾಗದ ರೇಲ್ವೆ ಸಲಹಾ ಸಮಿತಿ ಸದಸ್ಯ ಸುದರ್ಶನ ಪುತ್ತೂರು ಇವರು ಫಾಲ್ಘಾಟ್ ರೇಲ್ವೆ ಅಧಿಕಾರಿಗಳನ್ನು ಕೋರಿದ್ದರು. ಪ್ರೀಪೇಯ್ಡ್ ಆಟೋ ಸೌಲಭ್ಯ ಹಾಗೂ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಆರಂಭಿಸುವಂತೆ ಸಂಸದರಿಗೂ ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಸದರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದು ಸುದರ್ಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement