ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾಮನಬಿಲ್ಲು' ಮಕ್ಕಳ ಶಿಬಿರ ಸಮಾರೋಪ

Mainashree
Updated On : 27 May 2013, 11:19 am

ಮಣಿಪಾಲ: ಇಲ್ಲಿನ ಸಂಗಮ ಕಲಾವಿದೆರ್ ವತಿಯಿಂದ ಮಣಿಪಾಲ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ 'ಕಾಮನಬಿಲ್ಲು' ಮಕ್ಕಳ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಈ ಪ್ರಯುಕ್ತ ಬೆಳಗ್ಗೆ ಉಡುಪಿ ವಲಯದ ಅಗ್ನಿಶಾಮಕ ದಳದವರಿಂದ ಮಕ್ಕಳಿಗೆ ಅಗ್ನಿ ಅನಾಹುತ ಸಂದರ್ಭ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಗಳ ಪ್ರಾತ್ಯಕ್ಷಿಕೆ, ಮಕ್ಕಳಿಂದ ಬೆಂಕಿರಹಿತ ಅಡುಗೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.
ಸಂಜೆ ಸಮಾರೋಪ ಸಮಾರಂಭದಲ್ಲಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ತಾಪಂ ಸದಸ್ಯ ಉಮೇಶ್ ನಾಯ್ಕ್, ಉದ್ಯಮಿಗಳಾದ ಜಯಕರ ಶೆಟ್ಟಿ ಇಂದ್ರಾಳಿ, ರಂಜನ್ ಕೆ. ಭಾಗವಹಿಸಿದ್ದು, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗಮ ಕಲಾವಿದೆರ್ ಅಧ್ಯಕ್ಷ ಲಕ್ಷ್ಮಣ್ ಪೆರಂಪಳ್ಳಿ ವೇದಿಕೆಯಲ್ಲಿದ್ದರು.
ಶಿಬಿರದ ನಿರ್ದೇಶಕ ಡಾ. ಶ್ರೀಪಾದ್ ಭಟ್ ಮಾತನಾಡಿ, ಬದುಕಿನ ವಿನ್ಯಾಸಗಳನ್ನು ರೂಪುಗೊಳಿಸಲು ಇಂತಹ ಶಿಬಿರಗಳು ತರಗತಿಯ ಕೋಣೆಗಳ ಒಳಗೂ ಪ್ರವೇಶಿಸುವಂತಾಗಲಿ ಎಂದು ಆಶಿಸಿದರು. ಇದೇ ಸಂದರ್ಭ ಹಿರಿಯ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ನಂತರ 'ರಿಂಗಿನಾಟ' ನಾಟಕವನ್ನು ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಚಿನ್ನಾರಿ ಕಲಾವಿದರು ಪ್ರದರ್ಶಿಸಿದರು. ಶೀತಲ ಭಟ್ ಸಹನಿರ್ದೇಶನ ಮಾಡಿದರು. ರಾಜು ಮಣಿಪಾಲ ವಿನ್ಯಾಸಗೊಳಿಸಿದ್ದರು. ನಾಗೇಂದ್ರ ಪೈ ಸಂಘಟನೆಯ ಜವಾಬ್ದಾರಿ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement