ದೇವಾಡಿಗರ ಸೇವಾ ದಳ ಉದ್ಘಾಟನೆ
ಉಡುಪಿ: ಇಲ್ಲಿನ ದೇವಾಡಿಗರ ಸಂಘದ ಅಮೃತ ಮಹೋತ್ಸವದ ಆಚರಣೆಯ ಪೂರ್ವಭಾವಿಯಾಗಿ ದೇವಾಡಿಗರ ಸೇವಾ ದಳವನ್ನು ದುಬೈ ದೇವಾಡಿಗರ ಸಂಘದ ಅಧ್ಯಕ್ಷ ಹರೀಶ್ ಶೇರಿಗಾರ್ ಮತ್ತವರ ಪತ್ನಿ ಶರ್ಮಿಳಾ ಸೇರಿಗಾರ್ ಇತ್ತೀಚೆಗೆ ನಗರದ ದೇವಾಡಿಗರ ಸಭಾಭವನದಲ್ಲಿ ಉದ್ಘಾಟಿಸಿದರು.
ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಲ್ಲೊಬ್ಬರಾದ ಡಾ.ಬಿ.ಎಸ್. ಸೇರಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಸಹಾಯಕ ಮಹಾ ಪ್ರಬಂಧಕ ಜಗನ್ನಾಥ್ ಸೇರಿಗಾರ್, ಉದ್ಯಮಿ ಬಿ.ಜಿ. ಮೋಹನದಾಸ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕೃಷ್ಣ ಸೇರಿಗಾರ್ ಕುಂಜಿಬೆಟ್ಟು, ಕೋಶಾಧಿಕಾರಿ ರತ್ನಾಕರ ಜಿ.ಎಸ್. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹರೀಶ್ ಸೇರಿಗಾರ್ ದುಬೈ ಹಾಗೂ ಶರ್ಮಿಳಾ ಸೇರಿಗಾರ್, ಮುಂಬೈ ಸಂಘದ ಅಧ್ಯಕ್ಷ ಹಿರಿಯಡಕ ಮೋಹನ್ ದಾಸ್ ಅವರನ್ನು ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ನರಸಿಂಹ ಬಿ. ಸೇರಿಗಾರ್ ಸ್ವಾಗತಿಸಿದರು. ಅಧ್ಯಕ್ಷ ಗಣೇಶ ದೇವಾಡಿಗ ಬ್ರಹ್ಮಗಿರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರವೀಣ ಕುಮಾರ್ ನಿರೂಪಿಸಿದರು. ಕಾರ್ಯದರ್ಶಿ ಶ್ರೀಧರ ದೇವಾಡಿಗ ವಂದಿಸಿದರು.