ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಸುದ್ದಿ ಸಂಕ್ಷೇಪ

Mainashree
Updated On : 27 May 2013, 11:19 am

'ಬ್ಯಾಂಕುಗಳು ಸಾಮಾಜಿಕ ಬದ್ಧತೆ ಮೆರೆಯಲಿ'
ಮಣಿಪಾಲ: ಬ್ಯಾಂಕುಗಳು ತನ್ನ ಗ್ರಾಹಕರಿಗೆ ಮಾನವೀಯ ಸೇವೆಗಳ ಜತೆಗೆ ಜನಸಾಮಾನ್ಯರು ಎದುರಿಸುತ್ತಿರುವ ಕುಡಿಯುವ ನೀರಿನಂತಹ ಸಮಸ್ಯೆಗೆ ಪರಿಹಾರಕ್ಕೆ ಸಮುದಾಯ, ಸಾಮಾಜಿಕ ಬದ್ಧತೆಯನ್ನು ಮೆರೆಯಬೇಕೆಂದು ಪ್ರಸಾರ ಭಾರತೀಯ ಮಾಜಿ ಅಧ್ಯಕ್ಷ ಎಂ.ವಿ. ಕಾಮತ್ ಹೇಳಿದರು. ಅವರು ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ಮುಖ್ಯ ಶಾಖೆಯ ಗ್ರಾಹಕ ಸಮಾವೇಶ ಉದ್ಘಾಟಿಸಿ, ಮಾತನಾಡಿದರು. ವೀಕ್ಷಕರಾಗಿ ಬ್ಯಾಂಕಿನ ಮಹಾ ಪ್ರಬಂಧಕ ಎಸ್. ಬಾಲಕೃಷ್ಣನ್, ಶಾಖಾ ಮುಖ್ಯ ಪ್ರಬಂಧಕ ಅಶೋಕ್ ನಾಯಕ್, ಗ್ರಾಹಕರ ಪರವಾಗಿ ಡಾ.ಎಚ್. ಶಾಂತಾರಾಮ, ರಾಜಾರಾಮ ಭಟ್ ಹಾಗೂ ಎಚ್.ಎನ್.ಎಸ್. ರಾವ್ ಇದ್ದರು. ಅಕ್ಷಯ ಪ್ರಭುಗೆ ಸಿಂಡ್ ವಾಹನ ಸಾಲ ಮಂಜೂರಾತಿ ಪತ್ರ, ದಿನೇಶ್ ಪ್ರಭುಗೆ ಬ್ಯಾಂಕಿನ ಸಿಂಡ್ ಗೋಲ್ಡ್ ಡೆಬಿಟ್ ಕಾರ್ಡ್ ಅನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಪ್ರಬಂಧಕ ರಾಜನ್ ಜೈನ್ ಸ್ವಾಗತಿಸಿ ಬ್ಯಾಂಕಿನ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಳೆದ ಸಾಲಿನ ಪ್ರಗತಿಯ ವರದಿಯನ್ನು ಸಹಾಯಕ ಪ್ರಬಂಧಕ ಕೆ.ಕೆ. ವೇಣು ನೀಡಿದರು. ಮತ್ತೊಬ್ಬ ಪ್ರಬಂಧಕರಾದ ಎಚ್. ಅಮರ್‌ನಾಥ ರಾವ್ ವಂದಿಸಿದರು. ಸಿಂಡ್ ಆರ್‌ಸೆಟಿಯ ನಿರ್ದೇಶಕ ಮಂಜುನಾಥ ಉಪಾಧ್ಯ ನಿರೂಪಿಸಿದರು.
ಕೋಟ: ಇಂದು ಮುಷ್ಟಿ ಕಾಣಿಕೆ ಸಮರ್ಪಣೆ
ಕೋಟ: ಇಲ್ಲಿನ ಶ್ರೀ ಅಮೃತೇಶ್ವರಿ ದೇವಳದ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣದ ಪ್ರಯುಕ್ತ ಸೋಮವಾರ ಮಧ್ಯಾಹ್ನ 12 ಗಂಟೆಗೆ ಶಿಲಾ ಮುಹೂರ್ತ ಮತ್ತು ಸಾರ್ವಜನಿಕರಿಂದ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮವು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳ ಉಪಸ್ಥಿತಿಯಲ್ಲಿ ನಡೆಯಲಿರುವುದು. ಭಕ್ತಾದಿಗಳು ತಮ್ಮ ಶಕ್ತ್ಯಾನುಸಾರ ಕಾಣಿಕೆ ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement