ನಾಳೆ ಪೈದ್ವಯರ ಸ್ಮೃತಿ ದಿನಾಚರಣೆ
ಉಡುಪಿ: ಇಲ್ಲಿನ ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇವರ ಸಂಯುಕ್ತ ಆಶ್ರಯದಛಲ್ಲಿ ಡಾ.ಟಿ.ಎಂ.ಎ.ಪೈ. ಮತ್ತು ಟಿ.ಎ.ಪೈ. ಅವರ 'ಸ್ಮೃತಿ ದಿನ ಆಚರಣೆ' ಹಾಗೂ 'ಆರ್ಥಿಕ ಸೇರ್ಪಡೆಯಲ್ಲಿ ಸ್ವಸಹಾಯ ಗುಂಪುಗಳ ಪಾತ್ರ' ವಿಚಾರ ಸಂಕಿರಣವು ಎಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ನೆರವೇರಲಿದೆ. ಪೈದ್ವಯರ ಸಂಸ್ಮರಣೆಯನ್ನು ಹಿರಿಯ ಪತ್ರಕರ್ತ ಡಾ.ಎಂ.ವಿ. ಕಾಮತ್ ಮಾಡಲಿದ್ದಾರೆ. ಶ್ರೀ ಧರ್ಮಸ್ಥಳ ಕ್ಷೇತ್ರ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಮಂಜುನಾಥ್ ದಿಕ್ಸೂಚಿ ಭಾಷಣ ಮಾಡುತ್ತಾರೆ. ಇದರೊಂದಿಗೆ ತರಕಾರಿ ಬೀಜಗಳ ಬಿಡುಗಡೆಯನ್ನು ಉಡುಪಿಯ ಸಿಂಡಿಕೇಟ್ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಸುಬ್ರಮಣಿ ಆರ್., ರೈತರಿಗೆ ಸನ್ಮಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಧನಾಶೀಲ ಹಾಗೂ ಪಂಡಿತ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಭಟ್ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ.ಎನ್. ತಿಂಗಳಾಯ ವಹಿಸಲಿದ್ದಾರೆ.
ದ.ಕ.: ಈ ಬಾರಿ
ಹೆಚ್ಚು ಮಳೆ
ಮಂಗಳೂರು: ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷದ ಮೇ ತಿಂಗಳಿನಲ್ಲಿ ಅಧಿಕ ಮಳೆಯಾಗಿದ್ದು, ಸರಾಸರಿ 54.8 ಮಿಲಿಮೀಟರ್ ಸುರಿದಿದೆ. ಕಳೆದ ಬಾರಿ ಇದೇ ಸಮಯಕ್ಕೆ 15.3 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ ಸರಾಸರಿ 150 ಮಿ.ಮೀ. ಮಳೆಯಾಗಿದೆ.