ಕುತ್ಪಾಡಿ: ನಾಗಶಿಲಾ ಪುನರ್ ಪ್ರತಿಷ್ಠೆ
ಕುತ್ಪಾಡಿ: ಇಲ್ಲಿನ ಕರಾವಳಿಯ ಅತ್ಯಂತ ಪ್ರಾಚೀನ ಪ್ರಸಿದ್ಧ ನಾಗಾಲಯವಾದ ಮಾಂಗೋಡು ಶ್ರೀ ಸುಬ್ರಹ್ಮಣ್ಯ ದೇವಳದ ನಾಗಶಿಲಾ ಪುನರ್ ಪ್ರತಿಷ್ಠೆ, ಆಶ್ಲೇಷಾ ಬಲಿ, ನಾಗದರ್ಶನ, ಧಾರ್ಮಿಕ ಅನುಷ್ಠಾನಗಳು ಇತ್ತೀಚೆಗೆ ವೇದಮೂರ್ತಿ ಪುತ್ತೂರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ರ್ಜಿರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಡಾ.ನಿ. ವಿಜಯ ಬಲ್ಲಾಳ್, ಅಧ್ಯಕ್ಷ ಕೆ. ಶ್ರೀನಿವಾಸ ಆಚಾರ್ಯ, ಕಾರ್ಯಧ್ಯಕ್ಷ ಎ.ಎಮ್. ಹೆಗ್ಡೆ, ಸದಸ್ಯರಾದ ತೋನ್ಸೆ ಲಕ್ಷ್ಮೀಕಾಂತ್, ಅನಂತಕೃಷ್ಣ ಆಚಾರ್, ಆಡಳಿತ ಮಂಡಳಿ ಸದಸ್ಯರು ಇದ್ದರು.