ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಜ್ಞಾನವಸಂತ ಶೆಟ್ಟಿಗೆ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ

Lingaraj Badiger
Updated On : 31 May 2013, 12:41 pm

ಬ್ರಹ್ಮಾವರ: ಅಂತಾರಾಷ್ಟ್ರೀಯ ರೋಟರಿಯಿಂದ ಅತ್ಯುತ್ತಮ ಸೇವಾ ಸಾಧನೆಗೈದ ಜಿಲ್ಲಾ ಗವರ್ನರ್‌ಗಳಿಗೆ   ನೀಡಲಾಗುತ್ತಿರುವ ಪ್ರತಿಷ್ಠಿತ 'ಸರ್ವಿಸ್ ಎಬೌ ಸೆಲ್ಫ್ ಅವಾರ್ಡ್‌' ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3180 ಇದರ 2010 - 11ರ ಜಿಲ್ಲಾ ಗವರ್ನರ್ ಬ್ರಹ್ಮಾವರ ಜ್ಞಾನವಸಂತ ಶೆಟ್ಟಿ ಅವರಿಗೆ ಭಾನುವಾರ ಹಾಸನದಲ್ಲಿ ಜರುಗಿದ ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲಾ ಅಧಿವೇಶನ ಸಮಾರಂಭದಲ್ಲಿ ನೀಡಲಾಯಿತು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3190 ಇದರ ಮಾಜಿ ಗವರ್ನರ್ ಡಾ.ಎಸ್. ನಾಗೇಂದ್ರ, ರೋಟರಿ ಜಿಲ್ಲಾ ಗವರ್ನರ್ ಡಾ. ದೇವದಾಸ ರೈ ಪ್ರಶಸ್ತಿ ಹಸ್ತಾಂತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಗವರ್ನರ್ ಡಾ.ಎಚ್.ಎಸ್. ಶಿವಣ್ಣ, 2013 - 14ರ ಜಿಲ್ಲಾ ಗವರ್ನರ್ ಗುರುರಾಜ್, ಡಿಜಿಎನ್‌ಗಳಾದ ಡಾ. ಭಾಸ್ಕರ್, ಡಾ.ಎ. ಭರತೇಶ್, ಜಿಲ್ಲಾ ರೋಟರಿ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement