ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬ್ರಹ್ಮಾವರ: ಕೃಷಿ ಯಂತ್ರೋಪಕರಣ ರಿಪೇರಿ, ನಿರ್ವಹಣೆ ಕಾರ್ಯಾಗಾರ

Lingaraj Badiger
Updated On : 31 May 2013, 12:41 pm

ಬ್ರಹ್ಮಾವರ: ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕುಂದಾಪುರದ ಅಗ್ರಿಮಾರ್ಟ್ ಸಂಯುಕ್ತಾಶ್ರಯದಲ್ಲಿ ಸಿಂಪರಣಾ ಯಂತ್ರಗಳು ಹಾಗೂ ಕೃಷಿ ಯಂತ್ರೋಪಕರಣಗಳ ರಿಪೇರಿ ಹಾಗೂ ನಿರ್ವಹಣೆ ಕುರಿತು 2 ದಿನಗಳ ಉಚಿತ ಕಾರ್ಯಾಗಾರವನ್ನು ಜೂ. 6 ಮತ್ತು 7ರಂದು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ಕೃಷಿ ಯಂತ್ರೋಪಕರಣಗಳ ವಿವಿಧ ಭಾಗಗಳ ದುರಸ್ತಿ ವಿಧಾನ, ಸೇವೆ, ಸಿಗುವ ಸ್ಥಳ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಲಾಗುವುದು. ಆಸಕ್ತ ಯುವಕ/ಯುವತಿಯರು, ರೈತ/ರೈತ ಮಹಿಳೆಯರು ತಮ್ಮ ಹೆಸರುಗಳನ್ನು ಖುದ್ದಾಗಿ/ದೂರವಾಣಿಯ ಮೂಲಕ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಮೇ 30ರೊಳಗೆ ನೋಂದಾಯಿಸಿಕೊಳ್ಳಬೇಕು. 25 ಜನರಿಗೆ ಮಾತ್ರ ಆದ್ಯತೆ. ಹೆಚ್ಚಿನ ಮಾಹಿತಿಗಾಗಿ 9741774630ನ್ನು ಸಂಪರ್ಕಿಸಿ.

ಸಿಇಟಿ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮಂಗಳೂರು: ಈ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶದಲ್ಲಿ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯ 1149 ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು 10 ಸಾವಿರದೊಳಗಿನ ರ್ಯಾಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್‌ನಲ್ಲಿ 2, ವೈದ್ಯಕೀಯದಲ್ಲಿ 9 ಮಂದಿ 100ರೊಳಗಿನ ರ್ಯಾಂಕ್, ಎಂಜಿನಿಯರಿಂಗ್‌ನಲ್ಲಿ 6, ವೈದ್ಯಕೀಯದಲ್ಲಿ 15 ಮಂದಿ 200ರೊಳಗಿನ ರ್ಯಾಂಕ್, ಎಂಜಿನಿಯರಿಂಗ್‌ನಲ್ಲಿ 25, ವೈದ್ಯಕೀಯದಲ್ಲಿ 40 ಮಂದಿ 500ರೊಳಗಿನ ರ್ಯಾಂಕ್, ಎಂಜಿನಿಯರಿಂಗ್‌ನಲ್ಲಿ 65, ವೈದ್ಯಕೀಯದಲ್ಲಿ 75 ಮಂದಿ 1000ದೊಳಗಿನ ರ್ಯಾಂಕ್, ಎಂಜಿನಿಯರಿಂಗ್‌ನಲ್ಲಿ 331 ಮಂದಿ, ವೈದ್ಯಕೀಯದಲ್ಲಿ 297, 5000ದೊಳಗಿನ ರ್ಯಾಂಕ್, ಎಂಜಿನಿಯರಿಂಗ್‌ನಲ್ಲಿ 596, ವೈದ್ಯಕೀಯದಲ್ಲಿ 553 ಮಂದಿ 10 ಸಾವಿರದೊಳಗಿನ ರ್ಯಾಂಕ್ ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement