ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಲಿಟ್ಲ್‌ರಾಕ್ ಶಾಲಾ ವಿದ್ಯಾರ್ಥಿಗಳಿಂದ ಸಿಬಿಎಸ್‌ಇ ಪರೀಕ್ಷೆಯಲ್ಲಿ ಹೊಸ ದಾಖಲೆ

Lingaraj Badiger
Updated On : 31 May 2013, 12:41 pm

ಬ್ರಹ್ಮಾವರ: ಸಿಬಿಎಸ್‌ಇ ಪ್ರಕಟಿಸಿದ ಪರೀಕ್ಷಾ ಫಲಿತಾಂಶದಲ್ಲಿ 10ನೇ ತರಗತಿಯಲ್ಲಿನ ಎಲ್ಲಾ 244 ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯಲ್ಲಿನ ಎಲ್ಲಾ 68 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವುದರ ಮೂಲಕ ಇಲ್ಲಿನ ಲಿಟ್ಲ್‌ರಾಕ್ ತನ್ನ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೆ ಶುಭ ಮುನ್ನುಡಿಯನ್ನು ಬರೆದಿದೆ.
12ನೇ ತರಗತಿಯ ಸಚಿನ್ ಹೊಳ್ಳ (ಶೇ. 97.60 ಅಂಕಗಳೊಂದಿಗೆ) ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಮತ್ತು ರಮ್ಯ ರವೀಂದ್ರ ಕಾಮತ್ (ಶೇ. 96.60 ಅಂಕಗಳೊಂದಿಗೆ) ಜೀವಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 54 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
10ನೇ ತರಗತಿಯ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ. ಒಟ್ಟು 23 ವಿದ್ಯಾರ್ಥಿಗಳು 10 ಪಾಯಿಂಟ್ ಮತ್ತು 101 ವಿದ್ಯಾರ್ಥಿಗಳು 9 ಹಾಗೂ ಅದಕ್ಕಿಂತ ಹೆಚ್ಚಿನ ಪಾಯಿಂಟುಗಳನ್ನು ಪಡೆದಿರುತ್ತಾರೆ. ಲಿಟ್ಲ್‌ರಾಕ್ ಶಾಲಾ ಆಡಳಿತ ಮಂಡಳಿಯು ಈ ದಾಖಲೆಯ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರುಗಳನ್ನು ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement