ವನಸ್ಪತಿ ಪರಿಚಯ, ಆರೋಗ್ಯ ಜಾಗೃತಿ- ಮಾಹಿತಿ ಶಿಬಿರ
ಉಡುಪಿ: ಇಲ್ಲಿನ ಕಲ್ಸಂಕದ ರಾಯಲ್ ಗಾರ್ಡನ್ನ ಓಂ ಆಯುರ್ವೇದಿಕ್ ಸಂಸ್ಥೆಯಲ್ಲಿ ಶಾಲಾ ಮಕ್ಕಳಿಗೆ ವನಸ್ಪತಿಗಳ ಪರಿಚಯ ಹಾಗೂ ಆರೋಗ್ಯ ಜಾಗೃತಿಯ ಬಗ್ಗೆ ಇತ್ತೀಚೆಗೆ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು. ಹಿರಿಯ ಆಯುರ್ವೇದ ವೈದ್ಯ ನಿವೃತ್ತ ಪ್ರಾಂಶುಪಾಲ ಡಾ. ಕೃಷ್ಣಮೂರ್ತಿ ಅವರು ಆಡುಸೊಗೆ, ಅರಿಶಿನ, ಶುಂಠಿ, ಅಮೃತ ಬಳ್ಳಿ, ಕಹಿ ಹಾಲೆ, ನೆಲ್ಲಿ ಮುಂತಾದ ಔಷಧ ಮೂಲಿಕೆಗಳ ಪರಿಚಯ ಮಾತ್ರವಲ್ಲದೆ, ಉಪವಾಸ, ಸ್ನಾನ, ಆಹಾರ ಸೇವನೆ, ಸಿಟ್ಟು, ಮದ, ಮೋಹ, ಮತ್ಸರಗಳನ್ನು ತಡೆಹಿಡಿಯುವಿಕೆ ಮುಂತಾದ ಅನೇಕ ದಿನನಿತ್ಯದ ವಿಚಾರಗಳ ಬಗ್ಗೆ ತಿಳಿಸಿದರು.