ರಿಕ್ಷಾ ಚಾಲಕ, ಮಾಲೀಕರ ಸಂಘದಿಂದ ರಾಜ್ಯೋತ್ಸವ
ಹೆಬ್ರಿ: ಇಲ್ಲಿನ ರಿಕ್ಷಾ ಚಾಲಕ, ಮಾಲೀಕರ ಸಂಘದ ನೇತೃತ್ವದಲ್ಲಿ 58ನೇ ರಾಜ್ಯೋತ್ಸವ ಆಚರಣೆ ಹೆಬ್ರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನಾಗರಿಕ ಗಂಗಾಧರ ರಾವ್ ಧ್ವಜಾರೋಹಣಗೈದರು. ಹೆಬ್ರಿ ಪದವಿ ಕಾಲೇಜು ಪ್ರಾಂಶುಪಾಲ ಕೆ.ಜಿ. ಸುಧಾಕರ್, ಹೆಬ್ರಿ ಠಾಣಾಧಿಕಾರಿ ಸೀತಾರಾಮ ಪಿ. ದಿನದ ಮಹತ್ವ ಕುರಿತು ಮಾತನಾಡಿದರು. ಸಂಘದ ಕಾರ್ಯದರ್ಶಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಸಾಲ್ಯಾನ್, ಚಂದ್ರಹಾಸ್ ಇದ್ದರು. ಇದೇ ಸಂದರ್ಭ, ನಿಧನರಾದ ಸಂಘದ ಸದಸ್ಯರ ಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು. ಗೋಕುಲ್ ಆಚಾರ್ಯ ನಿರೂಪಿಸಿದರು.