ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಭಾರತ ಮೊಬೈಲ್ ಬಳಕೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನ: ಮ್ಯಾಥ್ಯು

Rashmi Kasaragodu
Updated On : 7 Nov 2013, 1:08 am

ಉಡುಪಿ: ಭಾರತ ಮೊಬೈಲ್ ಬಳಕೆಯಲ್ಲಿ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿದೆ. 2004ರಲ್ಲಿ ಕೇವಲ ಶೇ.7ರಷ್ಟು ಜನರು ಮೊಬೈಲ್ ಬಳಸುತ್ತಿದ್ದರು. ಪ್ರಸ್ತುತ ಶೇ.74 ಹೆಚ್ಚಾಗಿದೆ ಎಂದು ಭಾರತೀಯ ದೂರವಾಣಿ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್)ನ ಕರ್ನಾಟಕ- ಕೇರಳ ಪ್ರಾದೇಶಿಕ ಮುಖ್ಯಸ್ಥ ಸಿಬಿಚೆನ್ ಕೆ. ಮ್ಯಾಥ್ಯೂ ತಿಳಿಸಿದರು.
 ಅವರು ಬುಧವಾರ ಉಡುಪಿಯಲ್ಲಿ ಟ್ರಾಯ್ನ ಬೆಂಗಳೂರು ಪ್ರಾದೇಶಿಕ ಕಚೇರಿ ವತಿಯಿಂದ ನಡೆದ ಟೆಲಿಕಾಂ ಹಾಗೂ ಕೇಬಲ್ ಗ್ರಾಹಕರ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿರುವ 124 ಕೋಟಿ ಜನಸಂಖ್ಯೆಯಲ್ಲಿ ಶೇ.50 ಜನರು ಇನ್ನೂ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ, ಆದರೆ ಶೇ.90 ಮಂದಿ ಮೊಬೈಲ್ ಬಳಸುತ್ತಿದ್ದಾರೆ. ಇದು ಅಚ್ಚರಿಯಾದರೂ ನಿಜ ಎಂದರು. ಟ್ರಾಯ್ನ ಮುಖ್ಯ ಉದ್ದೇಶ ದೂರವಾಣಿ- ಕೇಬಲ್ ಗ್ರಾಹಕರ ಹಕ್ಕುಗಳ ಸಂರಕ್ಷಣೆ. ಕರ್ನಾಟಕದಲ್ಲಿ ಕೇಬಲ್ ಬಳಕೆದಾರರು 2014ರ ಡಿ.31ರೊಳಗಾಗಿ ಡಿಜಿಟಲ್ ಸೆಟ್ಟಾಪ್ ಬಾಕ್ಸ್ ಹೊಂದುವುದು ಕಡ್ಡಾಯಗೊಳಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ತಮ್ಮ ಹಕ್ಕು ಬಾಧ್ಯತೆಯ ಮಾಹಿತಿ ಸಹಾಯಕವಾಗುತ್ತದೆ ಎಂದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement