ಅಂಚೆಚೀಟಿ, ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನ
ಮೂಡುಬೆಳ್ಳೆ: ಇಲ್ಲಿನ ಸಂತ ಲಾರೆನ್ಸ್ ಪ.ಪೂ. ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಬಾಲಕಿಯರ ಎನ್ಎಸ್ಎಸ್ ಶಿಬಿರದ ಅಂಗವಾಗಿ ಅಂಚೆ ಚೀಟಿ, ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನ ಮತ್ತು ವಿಜ್ಞಾನ ಮಾದರಿ ಪ್ರಾತ್ಯಕ್ಷಿಕೆಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ಫ್ರೆಡ್ ಮಸ್ಕರೇನಸ್ ಉದ್ಘಾಟಿಸಿದರು.
ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪಿ. ರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಿಕಾ ಛಾಯಾಗ್ರಾಹಕ ಜನಾರ್ದನ ಕೊಡವೂರು, ಶಿರ್ವದ ಹಿಂದೂ ಪ.ಪೂ. ಕಾಲೇಜಿನ ಪ್ರಾಚಾರ್ಯ ರಾಜಗೋಪಾಲ್, ಮೂಡುಬೆಳ್ಳೆಯ ಉದ್ಯಮಿ ವಲೇರಿಯನ್ ನೊರೋನ್ಹಾ ಇದ್ದರು.
ಸಂಸ್ಥೆಯ ಪ್ರಾಚಾರ್ಯ ಪಾವ್ಲ್ ಸಿಕ್ವೇರಾ, ಮೈಸೂರು ವಿಭಾಗದ ಎನ್ಎಸ್ಎಸ್ ಸಹಾಯಕ ಸಂಯೋಜನಾಧಿಕಾರಿ ದಿನೇಶ್ ಕುಮಾರ್ ವೇದಿಕೆಯಲ್ಲಿದ್ದರು. ಶಿಬಿರಾಧಿಕಾರಿ ಎಡ್ವರ್ಡ್ ಲಾರ್ಸನ್ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಅತಿಥಿಗಳನ್ನು ಪರಿಚಯಿಸಿದರು. ನವೀನ್ ಕೊರೆಯಾ ನಿರೂಪಿಸಿದರು.
ಖ್ಯಾತ ಚಿತ್ರ ಕಲಾವಿದರಾದ ಜಿ.ಆರ್. ಉಪಾಧ್ಯಾಯ, ಬೆಳ್ಳೆ ಪದ್ಮನಾಭ ನಾಯಕ್ ಅವರಿಂದ ಚಿತ್ರಕಲಾ ಪ್ರದರ್ಶನ, ಗಿನ್ನೆಸ್ ದಾಖಲೆ ಖ್ಯಾತಿಯ ಡೇನಿಯಲ್ ಮಂತೇರೊ ಅವರಿಂದ ಅಂಚೆ ಚೀಟಿ ಪ್ರದರ್ಶನ, ಛಾಯಾಗ್ರಾಹಕರಾದ ಗುರುದತ್ ಕಾಮತ್, ರಾಘವೇಂದ್ರ ಕೊಡಂಗಳ, ಶ್ರೀಧರ ಶೆಟ್ಟಿಗಾರ್ ಕರಂದಾಡಿ ಅವರಿಂದ ಛಾಯಾಚಿತ್ರ ಪ್ರದರ್ಶನ, ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ಪ್ರಾತ್ಯಕ್ಷಿಕೆ ನಡೆಯಿತು.