ರಾಷ್ಟ್ರೀಯ ಶ್ವಾನ ಸ್ಪರ್ಧೆ: ಉಡುಪಿಯ ಬಾಂಡ್ಗೆ 8ನೇ ಸ್ಥಾನ
ಉಡುಪಿ: ಇತ್ತೀಚೆಗೆ ಗೋವಾದ ಪಣಜಿಯಲ್ಲಿ ನಡೆದ 'ಡಾಬರ್ಮನ್ ಸ್ಪೆಷಾಲಿಟಿ ಶೋ' ಎಂಬ ರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಉಡುಪಿಯ ವಿಶ್ವನಾಥ ಕಾಮತ್ ಅವರ ಬಾಂಡ್ ಹೆಸರಿನ ನಾಯಿ 8ನೇ ಸ್ಥಾನ ಪಡೆದುಕೊಂಡಿದೆ.
ಇದು ಕರ್ನಾಟಕದಿಂದ ಭಾಗವಹಿಸಿದ್ದ ಡಾಬರ್ ಮನ್ ತಳಿಯ ಏಕೈಕ ನಾಯಿಯಾಗಿತ್ತು.
ಸ್ಪರ್ಧೆಯಲ್ಲಿ ದೇಶಾದ್ಯಂತದಿಂದ ಒಟ್ಟು 70 ಡಾಬರ್ಮನ್ ನಾಯಿಗಳು ಭಾಗವಹಿಸಿದ್ದವು. ಅಂತಾರಾಷ್ಟ್ರೀಯ ಶ್ವಾನ ಸ್ಪರ್ಧೆಗಳ ತೀರ್ಪುಗಾರರಾಗಿ ಸಿ.ವಿ. ಸುದರ್ಶನ್ ಹಾಗೂ ರುಕ್ಮಣಿ ಸುದರ್ಶನ್, ಸ್ಟೀವ್ ಅಲ್ಮೇಡಾ, ಗಿರೀಶ್ ಕೇಳ್ಕರ್ ಪಾಲ್ಗೊಂಡಿದ್ದರು.