ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ; ಡಾ.ಬಿ.ಬಿ. ಶೆಟ್ಟಿ ಸಂಸ್ಮರಣೆ, ಕಲಾರಂಗ ಪ್ರಶಸ್ತಿ ಪ್ರದಾನ

Rashmi Kasaragodu
Updated On : 11 Nov 2013, 1:15 am

ಉಡುಪಿ: ಇಂದಿನ ಕಾಲಘಟ್ಟದಲ್ಲಿ ಪ್ರಶಸ್ತಿಗಾಗಿ ಲಾಬಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಮಾಡುವುದರಿಂದ ಪ್ರಶಸ್ತಿಗೂ ಹಾಗೂ ಪ್ರಶಸ್ತಿ ಪಡೆದವರಿಗೂ ಬೆಲೆ ಇರುವುದಿಲ್ಲ. ಹೀಗಿರುವಾಗ ಯಕ್ಷಗಾನ ಕಲಾರಂಗವು ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಪರ್ಯಾಯ ಶ್ರೀಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.  ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಸೋದೆ ವಾದಿರಾಜ ಮಠ ಉಡುಪಿ, ಯಕ್ಷಗಾನ ಕಲಾರಂಗ ಆಶ್ರಯದಲ್ಲಿ ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಡಾ.ಬಿ.ಬಿ. ಶೆಟ್ಟಿ ಸಂಸ್ಮರಣೆ, ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವಚನ ನೀಡಿದರು. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಾತನಾಡಿದರು.
ಪ್ರಶಸ್ತಿ ಪುರಸ್ಕೃತರು: ಕೆ.ಎಚ್. ದಾಸಪ್ಪ ರೈ ಪುತ್ತೂರು, ಸುದರ್ಶನ ವಿ. ಶೆಟ್ಟಿ ಪೊಳಲಿ, ನಾರಾಯಣ ಪೂಜಾರಿ ಬ್ರಹ್ಮಾವರ, ಕೆ.ಜಿ. ರಾಮ ರಾವ್ ಪುರಪ್ಪೆಮನೆ, ಸಾಗರ, ಪೆರುವೋಡಿ ನಾರಾಯಣ ಭಟ್ ಮುಳಿಗದ್ದೆ ಕಾಸರಗೋಡು, ರೆಂಜಾಳ ರಾಮಕೃಷ್ಣ ರಾವ್ ಬೆಳ್ಳಾರೆ ಸುಳ್ಯ, ಹಂದಲಸು ಲಕ್ಷ್ಮೀನಾರಾಯಣ ಶಿವಮೊಗ್ಗ, ನಾಗೇಶ ಗಾಣಿಗ ಕೋಣ್ಕಿ, ಮಹಾದೇವ ಹೆಗಡೆ ಕಪ್ಪೆಕರೆ ಹೊನ್ನಾವರ, ವಾಸುದೇವ ವಿಷ್ಣು ಭಟ್ ಹೊನ್ನಾವರ, ಗೋಪಾಲಕೃಷ್ಣಯ್ಯ ಎಚ್.ಎಸ್. ಶೃಂಗೇರಿ, ಕೊರಗಪ್ಪ ನಾಯ್ಕ ಕಾಸರಗೋಡು, ಸದಾನಂದ ಮದ್ಲೆಗಾರ, ಕೂಡ್ಲು ಕಾಸರಗೋಡು, ಬನ್ನಂಜೆ ನಾರಾಯಣ ಉಡುಪಿ ಹಾಗೂ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ ಅವರಿಗೆ ಕಲಾರಂಗದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement