ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬೈಕ್ ಡಿಕ್ಕಿ; ಸೂವರ್ಣ ನ್ಯೂಸ್ ವರದಿಗಾರರತಾಯಿ ಸಾವು

Lingaraj Badiger
Updated On : 11 Nov 2013, 12:45 pm

ಮಣಿಪಾಲ: ಇಲ್ಲಿನ ಶಿವಳ್ಳಿ ಗ್ರಾಮದ ಲಕ್ಷ್ಮೀಂದ್ರ ನಗರ ಎಂಬಲ್ಲಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸುವರ್ಣ ನ್ಯೂಸ್ ವಾಹಿನಿಯ ಉಡುಪಿ ವರದಿಗಾರ ಶಶಿಧರ ಮಾಸ್ತಿ ಬೈಲು ಅವರ ತಾಯಿ ಪ್ರೇಮಾವತಿ ಎಸ್.(58) ಮೃತರು. ಇವರು ಶನಿವಾರ ಲಕ್ಷ್ಮೀಂದ್ರ ನಗರದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಅಭಿಷೇಕ್ ಶೆಟ್ಟಿ ಎಂಬವರು ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪ್ರೇಮಾವತಿ ಅವರು  ತೀವ್ರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಅಸುನೀಗಿದ್ದಾರೆ. ಬೈಕ್ ಸವಾರ ಅಭಿಷೇಕ್ ಶೆಟ್ಟಿ ಹಾಗೂ ಹಿಂದೆ ಕುಳಿತಿದ್ದ ಕಾಜಲ್ ಶೆಟ್ಟಿ ಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ
ವಿಟ್ಲ: ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆದಿಲ ಗ್ರಾಮದ ಮಿತ್ತೂರು ಎಂಬಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮಿತ್ತೂರು ನಿವಾಸಿ ದಿ. ಐತಪ್ಪ ಗೌಡ ಅವರ ಪುತ್ರ ಬೆಳ್ಳಿಯಪ್ಪ ಗೌಡ (40) ಮೃತರು. ಇವರು ಕಳೆದ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗ್ಗೆ ಚಿದ್ರಗೊಂಡ ಮೃತ ದೇಹದ ವಿವಿಧ ಭಾಗಗಳು ರೈಲು ಹಳಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಅವರು ಮಂಗಳೂರು ರೇಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ರೇಲ್ವೆ ಪಿ.ಎಸ್.ಐ ಮರಿಸಿದ್ದಯ್ಯ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ಪೊಲಿಪು ದಿವಾಕರ ಕುಂದರ್ ನಿಧನ
ಪಡುಬಿದ್ರಿ: ಮೊಗವೀರ ಸಮಾಜದ ಮುಂದಾಳು ಪೊಲಿಪು ದಿವಾಕರ ಕುಂದರ್ (78) ಶನಿವಾರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತಮ ಸಂಘಟನಾತ್ಮಕ ಚತುರತೆ ಹೊಂದಿದ್ದ ಅವರು ಹಿರಿಯ ಸಮಾಜ ಚಿಂತಕರಾಗಿದ್ದರು. ಕಾಪು ಮಂಡಲ ಪಂಚಾಯಿತಿ ಪ್ರಧಾನರಾಗಿದ್ದು ತಮ್ಮ ಸ್ವಗ್ರಾಮದ ವಿದ್ಯಾಸಂಸ್ಥೆಗಳ ಸರ್ವತೋಮುಖ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಸಂತ ವಿ. ಸಾಲ್ಯಾನ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಯು.ಆರ್. ಸಭಾಪತಿ, ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಕರ್ಕೇರ, ಉಪಾಧ್ಯಕ್ಷ ವೈ. ಗಂಗಾಧರ ಸುವರ್ಣ, ಆನಂದ ಸಿ. ಕುಂದರ್, ಶಿವಪ್ಪ ಕಾಂಚನ್, ಶಶಿಕಾಂತ್ ಪಡುಬಿದ್ರಿ, ದಯಾನಾಥ್ ಕೋಟ್ಯಾನ್, ಶರತ್ ಗುಡ್ಡೆಕೊಪ್ಲ, ಬಿ.ಬಿ. ಕಾಂಚನ್ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement