ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಾರ್ಪ್ ಬ್ಯಾಂಕ್ ನಿವ್ವಳ ಲಾಭ ಇಳಿಮುಖ

Rashmi Kasaragodu
Updated On : 12 Nov 2013, 12:10 pm

ಮಂಗಳೂರು:  ಕಾರ್ಪೊರೇಶನ್ ಬ್ಯಾಂಕ್ ಅರ್ಧ ವಾರ್ಷಿಕ ಹಣಕಾಸು ವ್ಯವಹಾರ ಶೇ.21.74 ಹೆಚ್ಚಳವಾಗಿದೆ. ನಿರ್ವಹಣಾ ಲಾಭ  1,659.31 ಕೋಟಿ ದಾಖಲಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1,35.61 ಕೋಟಿ ದಾಖಲಾಗಿತ್ತು. ಆದರೆ ನಿವ್ವಳ ಆದಾಯ 393.46. ಕಳೆದ ವರ್ಷ ಇದೇ ಅವಧಿಯಲ್ಲಿ ರು. 775.97 ಕೋಟಿ ದಾಖಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭಾಂಶ ಪ್ರಮಾಣ ಶೇ.49.29 ಇಳಿಕೆಯಾಗಿದೆ ಎಂದು ಕಾರ್ಪ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಬನ್ಸಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ಆದಾಯ ಇಳಿಕೆಗೆ ಪ್ರಮುಖ ಕಾರಣ ಅನುತ್ಪಾದಕ ಆಸ್ತಿ ಮತ್ತು ಕಳೆದ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿದ್ದ ಕಷ್ಟದ ಪರಿಸ್ಥಿತಿ. ಸಾಲ ನೀಡಿಕೆ ಪ್ರಮಾಣ ಇಳಿಮುಖವಾದ್ದರಿಂದ ಹೆಚ್ಚು ಲಾಭ ಸಿಗಲಿಲ್ಲ ಎಂದರು.
ಒಟ್ಟು ಆದಾಯ 9,626.33 ದಾಖಲಿಸಿದ್ದು, ಕಳೆದ ಬಾರಿಗಿಂತ ಶೇ.19.6 ಪ್ರಗತಿ ಸಾಧಿಸಿದೆ. ಬಡ್ಡಿ ಆದಾಯ ಕಳೆದ ಸಾಲಿಗಿಂತ 1,310.37 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ.
 ಶೇರುಗಳ ಮೌಲ್ಯ ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.104.77 ಇದ್ದರೆ ಈ ಅವಧಿಯಲ್ಲಿ 51.46 ದಾಖಲಿಸುವ ಮೂಲಕ ಇಳಿಕೆಯಾಗಿದೆ. ಪ್ರತಿ ಶೇರ್ನ ಬುಕ್ ವ್ಯಾಲ್ಯೂ ಕಳೆದ ವರ್ಷ 611.08, ಈ ಅವಧಿಯಲ್ಲಿ ಹೆಚ್ಚಳವಾಗಿ 651.31 ಆಗಿದೆ ಎಂದರು.
 ಈ ವರ್ಷಾಂತ್ಯದಲ್ಲಿ ದೇಶದ ಎಲ್ಲೆಡೆ 300 ಶಾಖೆಗಳನ್ನು ಹೆಚ್ಚಿಸಲಿದ್ದೇವೆ. ಈಗಾಗಲೇ 68 ಶಾಖೆಗಳು ಆರಂಭಗೊಂಡಿವೆ. ನಿವ್ವಳ ಲಾಭ ಹೆಚ್ಚಿಸಲು ಎಟಿಎಂ ಇತ್ಯಾದಿ ಶಾಖೆಗಳ ಹೆಚ್ಚಿಸಲು, ಹೆಚ್ಚು ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ದೇಶಕ ಅಮರ್ಲಾಲ್ ದೌಲ್ತಾನಿ, ಬಿ.ಕೆ.ಶ್ರೀವಾಸ್ತವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement