ನಮೋ ಬ್ರಿಗೇಡ್ ಬೈಕ್ ರ್ಯಾಲಿಗೆ ಚಾಲನೆ
ಹೆಬ್ರಿ: ಹೆಬ್ರಿ ವಲಯ ನಮೋ ಬ್ರಿಗೇಡ್ ಉದ್ಘಾಟನಾ ಸಮಾರಂಭಕ್ಕೆ ಪೂರ್ವಭಾವಿಯಾಗಿ ಭಾನುವಾರ ಹೆಬ್ರಿ ತಾಣ ಅರ್ಧನಾರೀಶ್ವರ ದೇವಸ್ಥಾನ ಮುಂಭಾಗದಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು.
ಹೆಬ್ರಿ ವಲಯದ ಪೆರ್ಡೂರು, ಮುದ್ರಾಡಿ, ಕಬ್ಬಿನಾಲೆ, ವರಂಗ, ಮುದ್ರಾಡಿ, ಮುನಿಯಾಲು, ಅಜೆಕಾರು, ಸೋಮೇಶ್ವರ, ನಾಡ್ಪಾಲು, ಶಿವಪುರ, ಕುಚ್ಚೂರು, ಬೇಳಂಜೆ, ಸಂತೆಕಟ್ಟೆ, ಪಾಡಿಗಾರ ಘಟಕಗಳಿಂದ 300ಕ್ಕೂ ಮಿಕ್ಕಿದ ಬೈಕ್ಗಳಲ್ಲಿ ರ್ಯಾಲಿ ನಡೆಯಿತು. ರ್ಯಾಲಿಗೆ ಹಿರಿಯ ನಾಗರಿಕ ಎಚ್. ಗಂಗಾಧರ ರಾವ್ ಚಾಲನೆ ನೀಡಿದರು. ಶಾಸಕ ವಿ. ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಧಾಕರ ಹೆಗ್ಡೆ, ದಿನೇಶ ಶೆಟ್ಟಿ, ಅಶೋಕ ಕುಮಾರ್, ಮೋಹನದಾಸ್ ನಾಯಕ್, ಹೆಬ್ರಿ ವಲಯದ ನಮೋ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ರಾವ್ ಇದ್ದರು.