ಮಕ್ಕಳ ಭದ್ರತೆ ಕುರಿತು ಚಿಂತನ ಮಂಥನ
ಬ್ರಹ್ಮಾವರ: ಮಕ್ಕಳ ಮೇಲೆ ಕುಟುಂಬಕ್ಕೆ ಹತ್ತಿರವಾದ ಅಥವಾ ಪರಿಚಯಸ್ಥರಿಂದಲೇ ದೌರ್ಜನ್ಯವಾಗುತ್ತಿದೆ ಎಂದು ಉಡುಪಿಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹೇಳಿದ್ದಾರೆ. ಇಲ್ಲಿನ ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್ನಲ್ಲಿ ಇತ್ತೀಚೆಗೆ ದ.ಕ ಮತ್ತು ಉಡುಪಿ ಜಿಲ್ಲೆಯ ಐಸಿಎಸ್ಇ ಮತ್ತು ಸಿಬಿಎಸ್ಇ ಶಾಲೆಗಳ ಪ್ರಾಂಶುಪಾಲರಿಗೆ ಮಕ್ಕಳ ಭದ್ರತೆ ಕುರಿತು ಶಾಲೆಯ ವ್ಯವಸ್ಥೆಯಲ್ಲಿ ಮಾಡಬೇಕಾದ ಮಾರ್ಪಾಡುಗಳ ಬಗ್ಗೆ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಂಶುಪಾಲ ಪ್ರೊ. ಮ್ಯಾಥ್ಯೂ ಸಿ. ನೈನಾನ್, ಎಐಸಿಎಸ್ ಅಧ್ಯಕ್ಷೆ ಹಾಗೂ ತೋಕೂರು ಡಾ.ಎಂ.ಆರ್.ಎಸ್.ಎಂ. ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಲತಾ ರಾವ್, ನೀತಾ ಕಿಶೋರ್, ಕೆ.ಆನಂದಿ, ಅನಿಲ್ ಡಿಕೋಸ್ಟಾ, ಡಾ. ಥೋಮಸ್ ಕ್ವಾಡ್ರಸ್ ಇದ್ದರು.