ಮರಾಠಿ ಸಮಾಜದ ಮುಂದಾಳು ಮನೋಹರ ನಾಯ್ಕ ನಿಧನ
ಉಡುಪಿ; ಮರಾಠಿ ಸಮಾಜದ ಮುಂದಾಳು ದೊಡ್ಡಣಗುಡ್ಡೆ ಮನೋಹರ ನಾಯ್ಕ್ (57) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ದೊಡ್ಡಣಗುಡ್ಡೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವಿಭಜಿತ ದಕ ಜಿಲ್ಲಾ ಮರಾಠ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಉಭಯ ಜಿಲ್ಲೆಗಳಲ್ಲಿ ಮರಾಠಿ ಸಮಾಜವನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಉಡುಪಿ ಜಿಲ್ಲಾ ಮರಾಠ ಸ್ವಾಭಿಮಾನ ಜಾಗೃತಿ ಪ್ರತಿಷ್ಠಾನವನ್ನು ರಚಿಸುವಲ್ಲಿ ಮಾರ್ಗದರ್ಶಕರಾಗಿದ್ದರು. ಅಲ್ಲದೇ ಅವರು ಜಿಲ್ಲಾ ಕಾಂಗ್ರೆಸಿನ ಎಸ್ಸಿಎಸ್ಟಿ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾರ್ಕಳ ಭುವನೇಂದ್ರ ಕಾಲೇಜಿನ ಗ್ರಂಥಾಲಯದಲ್ಲಿ ಉದ್ಯೋಗಿಯಾಗಿದ್ದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ.