ಉಡುಪಿ: ಪಿಪಿಐಎಂಗೆ 3 ಎಂಬಿಎ ರ್ಯಾಂಕ್
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿಗಳು ಈ ಬಾರಿಯ ಮಂಗಳೂರು ವಿಶ್ವವಿದ್ಯಾಲಯದ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪರೀಕ್ಷೆಗಳ 6 ರ್ಯಾಂಕ್ಗಳಲ್ಲಿ, 3ನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫ್ಲಾವಿಯ ಜೆ. ನಜರೆತ್ 1ನೇ ರ್ಯಾಂಕ್ಗಳಿಸಿದ್ದಾರೆ. ಇವರು ಶಿರ್ವ ಇಗ್ನೇಷಿಯಸ್ ನಜರೆತ್ ಹಾಗೂ ಬೆನೆಡಿಕ್ಟ್ ಐ. ನಜರೆತ್ ಅವರ ಮಗಳು. ಇವರು ಪ್ರಥಮ ರ್ಯಾಂಕ್ ಜೊತೆಗೆ ಚಿನ್ನದ ಪದಕ ಹಾಗೂ ವೈಶ್ಯ ಬ್ಯಾಂಕ್ ನೀಡುವ ನಗದು ಬಹುಮಾನಕ್ಕೂ ಅರ್ಹರಾಗಿರುತ್ತಾರೆ.
ಸೂರಜ್ ಜೆ. ಭಟ್ 4ನೇ ರ್ಯಾಂಕನ್ನು ಪಡೆದಿದ್ದಾರೆ. ಇವರು ಉಡುಪಿಯ ಜನಾರ್ದನ ಭಟ್ ಹಾಗೂ ಸುಮಂಗಲ ಜೆ. ಭಟ್ ಅವರ ಮಗ. ಪ್ರಸ್ತುತ ಇವರು ಸಿಂಡಿಕೇಟ್ ಬ್ಯಾಂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ವೇತಾ ಎಸ್. 5ನೇ ರ್ಯಾಂಕ್ ಪಡೆದಿದ್ದಾರೆ. ಇವರು ಉದ್ಯಾವರದ ಸುರೇಶ್ ಹಾಗೂ ಅಪ್ಪಿ ಅವರ ಪುತ್ರಿ. ಪ್ರಸ್ತುತ ಇವರು ಕೂಡ ಸಿಂಡಿಕೇಟ್ ಬ್ಯಾಂಕ್ನ ಉದ್ಯೋಗಿಯಾಗಿದ್ದಾರೆ.
ಈ ಕಾಲೇಜು ಆರಂಭವಾಗಿ ಕಳೆದ 7 ವರ್ಷಗಳಿಂದ ಪ್ರತಿ ವರ್ಷವೂ ರ್ಯಾಂಕುಗಳನ್ನು ಗಳಿಸುತ್ತಿದೆ. 4 ಬಾರಿ ಪ್ರಥಮ ರ್ಯಾಂಕನ್ನು ಗಳಿಸಿದ ಸಾಧನೆ ಕಾಲೇಜಿನದ್ದು.