ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಆಸ್ಟ್ರೇಲಿಯಾ ವಿಶೇಷ ಒಲಿಂಪಿಕ್ಸ್‌ಗೆ ಉಡುಪಿಯ ಅರ್ಚನಾ ಆಯ್ಕೆ

Lingaraj Badiger
Updated On : 21 Nov 2013, 12:24 pm

ಉಡುಪಿ: ಡಿ.1ರಿಂದ 7ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶೇಷ ಮಕ್ಕಳ ಏಷಿಯಾ ಫೆಸಿಪಿಕ್ ಗೇಮ್ ಸ್ಪೆಷಲ್ ಒಲಂಪಿಕ್ಸ್- 2013ರಲ್ಲಿ ಭಾಗವಹಿಸುವುದಕ್ಕೆ ಉಡುಪಿ ಈಜುಪಟು ಎಂ.ಜೆ. ಅರ್ಚನಾ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಅರ್ಚನಾ ತಂದೆ ಕೆ.ಎಸ್. ಜೈವಿಠಲ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.   ವಿಶ್ವದ 32 ದೇಶಗಳ 2,500 ಮಂದಿ ಕ್ರೀಡಾಪಟುಗಳು ಭಾಗವಹಿಸುವ ಈ ಸ್ಪೆಷಲ್ ಒಲಂಪಿಕ್ಸ್‌ನ 25 ಮಿ. ಹಾಗೂ 50 ಮಿ. ಫ್ರಿಸ್ಟೈಲ್ ವಿಭಾಗದಲ್ಲಿ ಅರ್ಚನಾ ಸ್ಪರ್ಧಿಸಲಿದ್ದು, ಆಕೆಯೊಂದಿಗೆ ಕರ್ನಾಟಕದಿಂದ ಒಟ್ಟು 6 ಮಂದಿ ಭಾಗವಹಿಸಿಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅರ್ಚನಾ, 2003, 2005ರಲ್ಲಿ ವಿಶೇಷ ಮಕ್ಕಳಿಗಾಗಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಮತ್ತು 2009ರಲ್ಲಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಈಜುವಿಕೆಯಲ್ಲಿ ಆಕೆಯ ವಿಶೇಷ ಸಾಮರ್ಥ್ಯಕ್ಕಾಗಿ ಅಮೆರಿಕಾದ ಮೈಕೆಲ್ ಫೌಂಡೇಶನ್‌ನ ಪ್ರಮಾಣ ಪತ್ರವನ್ನೂ ಪಡೆದಿದ್ದಾರೆ. ಆಕೆಯ ಸಾಧನೆಯನ್ನು ಗುರುತಿಸಿ 2012ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಲಾಗಿದೆ ಎಂದು ಜೈವಿಠಲ್  ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅರ್ಚನಾ ಮತ್ತು ಆಕೆಯ ತಾಯಿ ವಿಜಯಲಕ್ಷ್ಮೀ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement