ಬ್ರಹ್ಮಾವರ: ಜಯಂಟ್ಸ್ ಪ್ರಶಸ್ತಿ ಪ್ರದಾನ
ಬ್ರಹ್ಮಾವರ: ಇಲ್ಲಿನ ಜಯಂಟ್ಸ್ ಗ್ರೂಪ್ ವತಿಯಿಂದ ರಾಜ್ಯ ಮಟ್ಟದ ಒಕ್ಕೂಟ ಸಮಾವೇಶ ಮತ್ತು ಜಯಂಟ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಜರುಗಿತು.ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಪ್ರಮೋದ್ ಮಧ್ವರಾಜ್ ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಜಯಂಟ್ಸ್ ಫೆಡರೇಶನ್ 6ರ ಅಧ್ಯಕ್ಷ ಜಯರಾಜ್ ಪ್ರಕಾಶ್ ವಹಿಸಿದ್ದರು. ಅತಿಥಿಗಳಾಗಿ ಮಂಗಳೂರಿನ ವೆಸ್ಟರ್ನ್ ಟೆಕ್ನೊಲೊಜಿಸ್ ಸಂಸ್ಥೆಯ ಮುಖ್ಯಸ್ಥ ಜಯಕಿಶನ್ ಭಟ್, ಜಯಂಟ್ಸ್ ಸಂಸ್ಥೆಯ ನಾಯಕರಾದ ಲಕ್ಷ್ಮಣನ್, ಇ. ಆರ್. ಅಶೋಕ್ ಹುಕ್ಕೇರಿ ಹಾಗೂ ದಿನಕರ್ ಅಮೀನ್ ಆಗಮಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿನ ಸಾಧಕರಾದ ರಮೇಶ್ ಕುಮಾರ್ (ವ್ಯಾಪಾರ), ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು (ಸಮಾಜ ಸೇವೆ), ಎಂ.ಆರ್. ವಾಸುದೇವ (ನಾಗರಿಕ ಆಡಳಿತ), ಡಾ. ಬಸವರಾಜ್ ಕಲ್ಲಪ್ಪ ಜಗಜಂಪಿ (ಶಿಕ್ಷಣ), ಪ್ರೇಮನಾಥ ಉಳ್ಳಾಲ (ಕ್ರೀಡೆ), ಹರೀಶ್ ಕರ್ಕೇರ (ವಿದ್ಯುನ್ಮಾನ ಮಾಧ್ಯಮ), ಹನುಮಂತ್ ಲಂಗಾಟಿ (ಕೃಷಿ) ಅವರಿಗೆ ಜಯಂಟ್ಸ್ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷ ವಿವೇಕಾನಂದ ಕಾಮತ್ ಸ್ವಾಗತಿಸಿದರು. ಉಮೇಶ್ ಬಿ., ಸುನಿತಾ ಎಂ., ಮಧುಸೂಧನ ಹೇರೂರು, ವಿಶ್ವನಾಥ ಶೆಟ್ಟಿ ಇದ್ದರು. ಡಯಾನ ಸಲ್ದಾನ ನಿರೂಪಿಸಿದರು. ವಿಕ್ರಮ್ ಪ್ರಭು ವಂದಿಸಿದರು.