ರೇವ್ ಪಾರ್ಟಿಯಲ್ಲಿ ಕಾಂಗ್ರೆಸ್-ಬಿಜೆಪಿ ಶಾಮೀಲು: ಜೆಡಿಎಸ್ ಆರೋಪ
ಉಡುಪಿ: ರಾಜ್ಯದಲ್ಲಿ ಬಿಜೆಪಿಯ ಆಡಳಿತಾವಧಿಯಲ್ಲಿ ಜಿಲ್ಲೆಯ ಸಂಸ್ಕೃತಿ ಹರಾಜು ಹಾಕಿದ ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ರೇವ್ ಪಾರ್ಟಿ ಮತ್ತು ನಂಗಾನಾಚ್ ಬಗ್ಗೆ ಸರ್ಕಾರ ತನಿಖೆ ನಡೆಸಿ 2 ವರ್ಷಗಳಾದರೂ ಇನ್ನೂ ವರದಿ ಬಹಿರಂಗವಾಗಿಲ್ಲ.
ಆಗ ವಿರೋಧ ಮಾಡಿದ ಕಾಂಗ್ರೆಸ್ಗೆ ನೈತಿಕತೆ ಇದ್ದರೆ ಈ ರೇವ್ ಪಾರ್ಟಿಯ ತನಿಖಾ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಬಹಿರಂಗಪಡಿಸಬೇಕು ಎಂದು ಜೆಡಿಎಸ್ ಮುಖಂಡ ಗುಲಾಂ ಮಹಮ್ಮದ್ ಆಗ್ರಹಿಸಿದ್ದಾರೆ.
ಈ ನಂಗನಾಚ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದವರು ಯಾರು? ಇದರ ಹಿಂದಿನ ಶಕ್ತಿಗಳು ಯಾವುದು? ಇದರಲ್ಲಿ ಭಾಗವಹಿಸಿ ಮೋಜುಮಸ್ತಿ ಮಾಡಿದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಸಂಪೂರ್ಣ ವಿವರ ಬಹಿರಂಗಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಗುಲಾಂ ಒತ್ತಾಯಿಸಿದ್ದಾರೆ.