ಕಂಗಲಾದ ರೈತ ಆತ್ಮಹತ್ಯೆ
ಭೇರ್ಯ: ತಂಬಾಕು ಬೆಲೆ ದಿಢೀರನೆ ಕುಸಿತಗೊಂಡ ಹಿನ್ನೆಲೆಯಲ್ಲಿ ಸಾಲದ ಹೊರೆ ತಾಳಲಾಗದೆ ಶುಕ್ರವಾರ ಸಂಜೆ ಕ್ರಿಮಿನಾಶಕ ಸೇವಿಸಿದ್ದ ರೈತನೊಬ್ಬ ಶನಿವಾರ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಹೊಸಅಗ್ರಹಾರ ಹೋಬಳಿಯ ಗುಳುವಿನತ್ತಿಗುಪ್ಪೆ ಗ್ರಾಮದ ಪಾಪೇಗೌಡ ಎಂಬವರ ಪುತ್ರ ತಮ್ಮೇಗೌಡ (45) ಮೃತ ದುರ್ದೈವಿ. ಮೃತರಿಗೆ ಪತ್ನಿ, ಒಬ್ಬ ಪುತ್ರರಿದ್ದಾನೆ. ಕಳೆದ ಒಂದು ತಿಂಗಳಿನಿಂದ ತಂಬಾಕು ಬೆಲೆ ಕುಸಿದು, ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರುಕುತ್ತಿಲ್ಲ ಎಂದು ಇತ್ತೀಚೆಗೆ ತಂಬಾಕು ಮಾರುಕಟ್ಟೆ ಮಂಡಳಿಯಲ್ಲಿ ಪ್ರತಿಭಟಿಸಲಾಗಿತ್ತು. ಆದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಇದೇ ರೈತನೊಬ್ಬನ ಸಾವಿಗೆ ಕಾರಣವಾಯಿತು.