ಮಲ ಸೋದರಿ ಮೇಲೆ ಅತ್ಯಾಚಾರ: ಸೆರೆ
ಉಡುಪಿ: ಸಹೋದರನೊಬ್ಬ ತನ್ನ ಮಲ ಸಹೋದರಿಯ ಮೇಲೆ ಇಲ್ಲಿನ ಇಂದಿರಾನಗರ ಎಂಬಲ್ಲಿ ಅತ್ಯಾಚಾರ ನಡೆಸಿದ್ದಾಗಿ ಶುಕ್ರವಾರ ನಗರ ಠಾಣೆಯಲ್ಲಿ ದಾಖಲಾಗಿದೆ.
ಆರೋಪಿ ಸುನೀಲ್(19)ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೇಂಟರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸುನೀಲ್ ಬೇಬಿ ಎಂಬವರ ಮೊದಲನೇ ಗಂಡನ ಮಗ. ಮೊದಲನೇ ಗಂಡ ಮೃತರಾದ ಬಳಿಕ ಬೇಬಿ ಮತ್ತೊಂದು ಮದುವೆಯಾಗಿದ್ದು, ಹದಿನೈದು ವರ್ಷದ ಮಗಳಿದ್ದಾಳೆ. ನ.11 ಮತ್ತು 18ರಂದು ಮನೆಯಲ್ಲಿ ಯಾರೂ ಇಲ್ಲದಾಗ ಸುನೀಲ್ ಈ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ತಾಯಿ ಬೇಬಿ ತಡವಾಗಿ ಶುಕ್ರವಾರ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಸುನೀಲ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.