ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಗರಾಭಿವೃದ್ಧಿ ಇಲಾಖೆಯಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವ: ಸಚಿವ ಸೊರಕೆ

Vishwanath S
Updated On : 4 Oct 2013, 11:36 am

ಉಡುಪಿ: ಸಮಾಜಸೇವಾ ಮನೋಭಾವ ಹೆಚ್ಚಿಸುವ ಜನಜಾಗೃತಿ ಕೆಲಸ ನಡೆಯಬೇಕಿದೆ, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯಲ್ಲಿ ರೋಟರಿಯಂತಹ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವ ಪಡೆಯುವ ಯೋಚನೆ ಇದೆ. ಸರ್ಕಾರೇತರ ಸಂಸ್ಥೆಗಳಿಗೆ ಅಭಿವೃದ್ಧಿಯ ಮಹತ್ತರ ಹೊಣೆ ನೀಡಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ನಗರಾಭಿವೃದ್ಧಿಸಚಿವ ವಿನಯಕುಮಾರ್ ಸೊರಕೆ ಅಭಿಪ್ರಾಯಪಟ್ಟಿದ್ದಾರೆ.
 ಮಲ್ಪೆ ಕೊಡವೂರು ರೋಟರಿ ವತಿಯಿಂದ ನಡೆದ ಸ್ನೇಹ- ಸೇವೆ- ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಇದೇ ಸಂದರ್ಭ ಸಚಿವರಿಗೆ ರೋಟರಿ ಮಲ್ಪೆ ಕೊಡವೂರಿನ ಗೌರವ ಸದಸ್ಯತ್ವವನ್ನು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸೂರ್ಯಪ್ರಕಾಶ್ ಭಟ್ ಪ್ರದಾನ ಮಾಡಿದರು. ಅಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಯಾನಂದ ಶೆಟ್ಟಿ, ಪ್ರಕಾಶ್ ಎಂ.ಕೊಡವೂರು, ವೈಜಯಂತಿ ಕಾರಂತ್, ಬಾಸುಮ ಕೊಡಗು, ಆಸ್ಟ್ರೋ ಮೋಹನ್ ಅವರನ್ನು ಅಭಿನಂದಿಸಲಾಯಿತು.
ರೋಟರಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ನಾಯಕರಾದ ಜ್ಞಾನವಸಂತ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮಹೇಶ್ ಕುಮಾರ್ ಎಂ., ಮಹಾಬಲೇಶ್ವರ ಭಟ್ಟ, ಮಾಧವ ಸುವರ್ಣ, ಪ್ರಕಾಶ್ ಶೆಟ್ಟಿ ಬ್ರಹ್ಮಾವರ ಇದ್ದರು. ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement