ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮದ್ಯದ ಅಮಲಲ್ಲಿ ವಿದ್ಯುತ್ ಕಂಬವೇರಿದ!

Lingaraj Badiger
Updated On : 7 Oct 2013, 11:54 am

ಉಡುಪಿ: ಮದ್ಯದ ಅಮಲಿನಲ್ಲಿ ಯುವಕನೊಬ್ಬ ವಿದ್ಯುತ್ ಕಂಬ ಹತ್ತಿ ಕುಳಿತು ಅವಾಂತರ ಸೃಷ್ಟಿಸಿದ ಘಟನೆ ಇಲ್ಲಿನ ಗೀತಾಂಜಲಿ ಥಿಯೇಟರ್ ಬಳಿ ಭಾನುವಾರ ನಡೆದಿದೆ.
ಮಧ್ಯಾಹ್ನ ಸುಮಾರು 1.30ಕ್ಕೆ ಅಪರಿಚಿತನೊಬ್ಬ ವಿದ್ಯುತ್ ಹರಿಯುವ ಕಂಬವೇರಿದ್ದನ್ನು ಕಂಡು ಸಾರ್ವಜನಿಕರು ಆತಂಕಗೊಂಡರು. ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಆತನನ್ನು ಕೆಳಗಿಸುವ ಪ್ರಯತ್ನ ನಡೆಸಿದರು.
ಈ ಮಧ್ಯೆ ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ, ಆ ಕಂಬದ ವಿದ್ಯುತ್ ಕಡಿತಗೊಳಿಸಲಾಯಿತು. ಕಂಬದ ತಂತಿಯ ಸಹಾಯ ಪಡೆದ ಯುವಕ ಹತ್ತಿರದ ಬಹುಮಹಡಿ ಕಟ್ಟಡಕ್ಕೆ ಜಿಗಿದ. ಪೊಲೀಸರು ಹಾಗೂ ಸಾರ್ವಜನಿಕರು ಆತನ ಬೆನ್ನು ಹತ್ತಿದರು. ಆತ ಅಲ್ಲಿಂದ ಆಭರಣ ಜ್ಯುವೆಲ್ಲರಿ ಸಮೀಪದ ಇನ್ನೆರಡು ಕಟ್ಟಡ ಹತ್ತಿದ. ಬಳಿಕ ಕುಡಿದ ಅಮಲು ಇಳಿಯಿತೋ ಏನೋ, ಸಾರ್ವಜನಿಕರ ಸಹಾಯದೊಂದಿಗೆ ಇಳಿದು ಬಂದ.
ಈತನನನ್ನು ವಿಚಾರಿಸಿದಾಗ, ಆತ ಮಂಗಳೂರು ಮೂಲದ ರಾಜೇಶ್ ಎಂದು ತಿಳಿದು ಬಂದಿದ್ದು ಠಾಣೆಗೆ ಕರೆದೊಯ್ಯಲಾಗಿದೆ.
ಮಟ್ಕಾ; ವ್ಯಕ್ತಿ ಸೆರೆ, ನಗದು ವಶ
ಪಡುಬಿದ್ರಿ: ಇಲ್ಲಿನ ಹೆಜಮಾಡಿ ಪೇಟೆಯ ರಿಕ್ಷಾ ನಿಲ್ದಾಣ ಎದುರಿನ ಗೂಡಂಗಡಿ ಹಿಂಭಾಗದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆಟಕ್ಕೆ ಬಳಸಿದ ರು. 1550 ನಗದು ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ಹಸುಳೆ ಸಾವು
ಉಡುಪಿ: ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 2 ತಿಂಗಳು ಪ್ರಾಯದ ಹಸುಳೆ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೂಲತಃ ಬೆಳಗಾವಿಯ ಅಶೋಕ್ ಕೆ. ಮೂಲ್ಯ ಅವರ 2 ತಿಂಗಳ ಮಗು ಕ್ಷಮ್ಯಾಳನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಗು ಮೃತಪಟ್ಟಿದೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶತಾಯುಷಿ ರಾಜೀವಿ ಆಚಾರ್ಯ ನಿಧನ
ಮೂಲ್ಕಿ: ಹಳೆಯಂಗಡಿ ಸಮೀಪದ ತೋಕೂರಿನ ಅನ್ನಪೂರ್ಣೇಶ್ವರಿ ನಿಲಯ ನಿವಾಸಿ, ಶತಾಯುಷಿ ರಾಜೀವಿ ಆಚಾರ್ಯ (102) ಭಾನುವಾರ ನಿಧನರಾದರು. ಮೃತರು ಇಬ್ಬರು ಗಂಡು, ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement